ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹೊರವಲಯದಲ್ಲಿರುವ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿಗೆ Subbaiah Dental College ನ್ಯಾಷನಲ್ ಅಸೆಸ್ಮೆಂಟ್ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್(ನ್ಯಾಕ್) ಮಾನ್ಯತೆ ದೊರೆತಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿನಯ ಶ್ರೀನಿವಾಸ್, ನಮ್ಮ ಸಂಸ್ಥೆ ನ್ಯಾಕ್ ಮಾನ್ಯತೆಯ ಹಂತಕ್ಕೆ ತಲುಪಿದ್ದು, ಇದಕ್ಕಾಗಿ ನಮ್ಮ ಸಂಸ್ಥೆಯ ಸ್ವಯಂ ಅಧ್ಯಯನ ವರದಿಯನ್ನು ಇತ್ತೀಚೆಗೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಫೆಬ್ರವರಿ ತಿಂಗಳಿಯಲ್ಲಿ ನ್ಯಾಕ್ ಕಮಿಟಿಯು ಕಾಲೇಜಿಗೆ ಭೇಟಿ ನೀಡಿತ್ತು. ಇದೀಗಿ ನಮ್ಮ ಕಾಲೇಜಿಗೆ ನ್ಯಾಕ್ ಮಾನ್ಯತೆಯನ್ನು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

Also read: ಕೇಸರಿಶಾಲು ಹಾಕಿದರೆ ದೇಶಭಕ್ತಿ ಎನ್ನುವುದು ತಪ್ಪು ಕಲ್ಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post