ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಏರೋಬಿಕ್ಸ್, ಹಿಪ್ ಹಾಪ್ ಸ್ಪರ್ಧೆಯಲ್ಲಿ #aerobics-hiphop Competition ನಗರದ ಪ್ರತಿಷ್ಠಿತ ಪಿಇಎಸ್ ಪಬ್ಲಿಕ್ ಶಾಲೆಯ #PES Public School ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಮಹಾರಾಷ್ಟ್ರದ ಸ್ಪೋರ್ಟ್ಸ್ ಏರೋಬಿಕ್ಸ್ ಅಂಡ್ ಫಿಟ್ನೆಸ್ ಅಸೋಸಿಯೇಷನ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ 19ನೇ ಐಎಸ್’ಎಎಫ್’ಎಫ್ ಇಂಡಿಯನ್ ನ್ಯಾಷನಲ್ ಏರೋಬಿಕ್ಸ್ ಹಾಗೂ ಹಿಪ್ ಹಾಪ್ ಚಾಂಪಿಯನ್ಷಿಪ್ 2024ರ ಈ ಸ್ಪರ್ಧೆಯನ್ನು ಶಿರಡಿಯಲ್ಲಿ ಆಯೋಜಿಸಲಾಗಿತ್ತು.
Also read: ರಾಜ್ಯದಲ್ಲಿ ಎಷ್ಟು ಖಾಸಗಿ ಮೆಡಿಕಲ್ ಶಾಪ್’ಗಳಿವೆ? ಅಕ್ರಮ ಔಷಧಿ ಅಂಗಡಿಗಳ ಬಗ್ಗೆ ಸರ್ಕಾರ ಹೇಳುವುದೇನು?
ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪಿಇಎಸ್ ಪಬ್ಲಿಕ್ ಶಾಲೆಯ 6, 7 ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳಾದ ತೇಜಸ್ವಿನಿ, ಪ್ರತೀತ, ಐಸಿರಿ, ಲಕ್ಷ್ಮೀ ಅಭೀಷ್ಠಾ, ಚಂದನಾ, ಜಶೋಧಾ ಭಾಟಿ, ಚಿನ್ಮಯೀ, ಭುವನ, ಸಾಕ್ಷಿ ಇವರುಗಳು ರೋಮಾಂಚನಗೊಳ್ಳುವಂತೆ ತಮ್ಮ ನೃತ್ಯವನ್ನು ಪ್ರದರ್ಶನ ಮಾಡಿ, ಸುವರ್ಣ ಪದಕ ಪಡೆಯುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಏರೋಬಿಕ್ಸ್ ಹಾಗೂ ಹಿಪ್ ಹಾಪ್ ಡ್ಯಾನ್ಸ್’ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಡ್ಯಾನ್ಸ್ ಮಾಸ್ಟರ್ ಅರುಣ್, ಕಿರಣ್ ಅವರಿಗೂ ವಿದ್ಯಾರ್ಥಿಗಳಿಗೂ, ಪೋಪಕರಿಗೂ ಆಡಳಿತ ಮಂಡಳಿ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ಕೌಶಲ್ಯಯುತ ಕಲಿಕೆಗಾಗಿ ನುರಿತ ಅನುಭವಿ ಶಿಕ್ಷಕರ ತಂಡವು ಮಕ್ಕಳಿಗೆ ಯೋಗ, ಕ್ರೀಡೆ, ಸಂಗೀತ ಹಾಗೂ ನೃತ್ಯಗಳನ್ನು ಕಲಿಸುತ್ತಿರುವುದು ವಿಶೇಷವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post