ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೂಗೂರಿನಲ್ಲಿ ಕುಟುಂಬಸ್ಥರು ಮದುವೆಗೆ ತೆರಳಿದ ವೇಳೆ ಮನೆಯ ಹೆಂಚು ತೆಗೆದು ಕನ್ನ ಹಾಕಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಮದುವೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಸೂಗೂರಿನ ವಿರುಪಾಕ್ಷಪ್ಪ ಎಂಬುವರ ಮನೆಯವರು ಮದುವೆಗೆ ತೆರಳಿದ ವೇಳೆ ಬಿರುವಿನಲ್ಲಿ ಇಟ್ಟ 50 ಗ್ರಾಂ ಬಂಗಾರವನ್ನು ಕಳ್ಳರು ಕದ್ದೊಯ್ದಿದ್ದಾರೆ.
Also read: ಸಾಲುಮರದ ತಿಮ್ಮಕ್ಕಗೆ ತೀವ್ರ ಅನಾರೋಗ್ಯ | ಅಪೋಲೋ ಆಸ್ಪತ್ರೆಗೆ ದಾಖಲು
ಮನೆಯ ಹಿಂಬದಿಯಿಂದ ಏಣಿ ಹಾಕಿ ಹಂಚು ತೆಗೆದು ಮನೆ ಒಳಗೆ ನುಗ್ಗಿದ ಕಳ್ಳರು ಕಳ್ಳತನ ಮಾಡಿದ್ದಾರೆ. ಅಕ್ಕಪಕ್ಕದ ಮನೆಯವರೂ ಸಹ ಮದುವೆಗೆ ತೆರಳಿದ್ದರು. ಇದನ್ನರಿತೇ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post