ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ಅನುಮತಿ ಪಡೆದಿದ್ದರೂ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಮೈಕ್ ಹಾಗೂ ಕುರ್ಚಿಗಳನ್ನು ಏಕಾಏಕಿ ತೆಗೆಸಿ ತೊಂದರೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಡಿಸಿಎಂ, ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #KSEshwarappa ಕೆಂಡಾಮಂಡಲವಾದ ಘಟನೆ ಪಟ್ಟಣದಲ್ಲಿ ನಡೆದಿದೆ.
ಇಂದು ಶಿರಾಳಕೊಪ್ಪ #Shiralakoppa ಮತ್ತು ಸೊರಬ #Soraba ರಸ್ತೆಯ ಮೈಲಾರ ಲಿಂಗೇಶ್ವರ ದೇವಾಲಯದ ಬಳಿ ಈಶ್ವರಪ್ಪನವರ ಚುನಾವಣಾ ಬಹಿರಂಗ ಸಭೆಗೆ ಅಧಿಕಾರಿಗಳು ಅಡ್ಡಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಘಟನೆ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ಈಶ್ವರಪ್ಪ ಅನುಮತಿ ಪಡೆದಿದ್ದರೂ ವೇದಿಕೆ, ಕುರ್ಚಿ ಖಾಲಿ ಮಾಡಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲೇ ತೆರೆದ ವಾಹನದಲ್ಲಿ ಸಭೆ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಯಡಿಯೂರಪ್ಪ ಹೊಂದಾಣಿಕೆ ಮಾಡಿಕೊಂಡು ವೇದಿಕೆ ತೆಗೆಸಿರಬಹುದು. ಗೆದ್ದು ಇದೇ ಜಾಗದಲ್ಲಿ ಬಂದು ನಿಂತು ನನ್ನ ಮಾತು ಕೇಳುತ್ತಿರುವ ನಿಮಗೆ ಇದೇ ಜಾಗದಲ್ಲಿ ಸನ್ಮಾನ ಮಾಡುತ್ತೇನೆ. ಯಾರಾದರೂ ತಡೆಯಲಿ ನೋಡೋಣ ಎಂದು ಸವಾಲು ಹಾಕಿದರು.
Also read: ಗಮನಿಸಿ! ಮೇ 7ರಂದು ಸಿಬ್ಬಂದಿಗಳಿಗೆ ಸಂಬಳ ಸಹಿತ ರಜೆ ನೀಡಲೇಬೇಕು | ತಪ್ಪಿದಲ್ಲಿ ಕ್ರಮ ನಿಶ್ಚಿತ
ಫೋಟೊ ತೆಗೆಯಲು ಬಂದ ಯುವಕನಿಗೆ ನನ್ನ ಫೋಟೊ ತೆಗೆಯಬೇಡ, ಖಾಲಿ ಕುರ್ಚಿಗಳ ಫೋಟೊ ತೆಗೆದು ಯಡಿಯೂರಪ್ಪ ಮನೆಗೆ ಕಳಿಸು ಎಂದರು.
ಇನ್ನೊಮ್ಮೆ ನನ್ನ ಕಾರ್ಯಕ್ರಮಗಳಿಗೆ ತೊಂದರೆ ಕೊಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post