ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ತಡಸ ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಶಿರಾಳಕೊಪ್ಪ ಶಿಕಾರಿಪುರ ಮಧ್ಯ ನಿರ್ಮಾಗೊಂಡ ಟೋಲ್ ನಿಂದಾಗಿ ಸ್ಥಳೀಯ ರೈತರಿಗೆ, ಕೂಲಿ ಕಾರ್ಮಿಕರಿಗೆ, ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು ಅದನ್ನು ಕಿತ್ತೊಗಿಯಬೇಕೆಂದು ರೋಚ್ಚಿಗೆದ್ದ ಸ್ಥಳೀಯರು ಟೋಲ್ ವಿರುದ್ದ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಪಟ್ಟಣದ ಶ್ರೀ ವೀರಭದ್ರೇಶ್ವರ ಸಭಾಂಗಣದ್ದಲ್ಲಿ ನಡೆದ ಸಭೆಯಲ್ಲಿ ಟೋಲ್ ಗೇಟ್ ವಿರುದ್ದದ ಹೋರಾಟಕ್ಕೆ ಸಮಿತಿಯೂ ರಚನೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಸಮಿತಿಯ ನೂತನ ಅಧ್ಯಕ್ಷ ನ್ಯಾಯವಾದಿ ಶಿವರಾಜ್ ಮಾತನಾಡಿ ಸದರಿ ಟೋಲ್ ಗೇಟ್ ನಿಂದಾಗಿ ಸ್ಥಳೀಯರಿಗೆ, ಅಕ್ಕ ಪಕ್ಕದ ರೈತ ಭಾಂದವರಿಗೆ, ರೋಗಿಗಳಿಗೆ ದಿನ ನಿತ್ಯ ಆರ್ಥಿಕ ವಾಗಿ ತೊಂದರೆ ಆಗುತ್ತಿದೆ ಎಂದರು.

ಪಟ್ಟಣದ ಹಿರಿಯ ವೈದ್ಯ ಡಾ.ಮುರುಘರಾಜ್, ರೈತ ಸಂಘದ ಹಿರಿಯರಾದ ಜಯಪ್ಪ ಗೌಡರು, ಜಿಲ್ಲಾಧ್ಯಕ್ಷ ಹಾಲಪ್ಪ ಗೌಡ್ರು, ಕಾರ್ಯಧ್ಯಕ್ಷ ಪುಟ್ಟನ ಗೌಡ್ರು ಆಮ್ ಆದ್ಮಿ ಪಕ್ಷದ ಚಂದ್ರಶೇಖರ ರೇವಣಕಾರ,ಕೆ ಪಿ ಸಿ ಸಿ ಸದಸ್ಯ ಎನ್ ಚಂದ್ರಪ್ಪ ಹಿರೇಜಂಬೂರು, ಬಿಜೆಪಿ ಮುಖಂಡ ರಟ್ಟೀಹಳ್ಳಿ ಲೋಕಪ್ಪ ಸತೀಶ್ ತಾಳಗುಂದ ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು, ರೈತರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post