ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಗಂಧ ಸಂಸ್ಥೆ, ಬನ್ನಂಜೆ ಅಭಿಮಾನಿಗಳ ಬಳಗ ಹಾಗೂ ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ, ಈಶ್ವರವನ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಜ.4ರ ಸಂಜೆ 4ಗಂಟೆಯಿಂದ ರಾತ್ರಿ 9ರ ವರೆಗೆ ಕುವೆಂಪು ರಂಗಮಂದಿರದಲ್ಲಿ ನಾಡುಕಂಡ ಶ್ರೇಷ್ಠ ಮೇಧಾವಿ, ಸಂಸ್ಕøತ ವಿದ್ವಾಂಸರು, ಕವಿ ವಿದ್ಯಾವಾಚಾಸ್ಪತಿ ಪದ್ಮಶ್ರೀ ಡಾ.ಬನ್ನಂಜೆ ಗೋವಿಂದಾಚಾರ್ಯರ 90ನೇ ಜನ್ಮದಿನಾಚರಣೆ ಅಂಗವಾಗಿ “ಬನ್ನಂಜೆ 90”ರ ವಿಶ್ವ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬನ್ನಂಜೆ ಅಭಿಮಾನಿ ಬಳಗದ ಸಂಚಾಲಕ ವಿನಯ್ ಶಿವಮೊಗ್ಗ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯರ ವ್ಯಕ್ತಿತ್ವದ ವಿವಿಧ ಮಜಲುಗಳನ್ನು ಅನಾವರಣಗೊಳಿಸಲು ಮೂರು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಬನ್ನಂಜೆಯವರ #Bannanje ಸಾಂಸ್ಕøತಿಕ ಪ್ರಜ್ಞೆ ಕುರಿತ ನೀನಾಸಂ ಹೆಗ್ಗೋಡಿನ ನಿರ್ದೇಶಕರಾದ ಕೆ.ವಿ.ಅಕ್ಷರ, ಬನ್ನಂಜೆ ಗೋವಿಂದಾಚಾರ್ಯ ಎಂಬ ವಿಸ್ಮಯ ಕುರಿತು ಮಂಕುತಿಮ್ಮನ ಕಗ್ಗ ಖ್ಯಾತಿಯ ವಿದ್ವಾನ್ ಜಿ.ಎಸ್.ನಟೇಶ್ ಹಾಗೂ ನಾನುಕಂಡ ನನ್ನ ಅಪ್ಪ ಕುರಿತು ಡಾ.ವೀಣಾ ಬನ್ನಂಜೆಯವರು ಮಾತನಾಡಲಿದ್ದಾರೆ ಎಂದರು.
ಶ್ರೀಗಂಧ ಸಂಸ್ಥೆಯ ಅಧ್ಯಕ್ಷ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಅಧ್ಯಕ್ಷ ಡಾ.ಮಲ್ಲೇಪುರಂ, ಜಿ.ವೆಂಕಟೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ದುರ್ಗಾ ಲಾಡ್ಜ್ ಮಾಲೀಕರಾದ ಎಸ್.ವಿ.ದತ್ತಾತ್ರೇಯ, ಶ್ರೀ ವೆಂಕಟೇಶ್ವರ ಸ್ವೀಟ್‍ಸ್ಟಾಲ್‍ನ ಮಾಲೀಕರು ಹಾಗೂ ಬನ್ನಂಜೆ ಅಭಿಮಾನ ಬಳಗದ ಶಿವಮೊಗ್ಗದ ಅಧ್ಯಕ್ಷ ಕೆ.ಎಲ್.ಉಪಾಧ್ಯಾಯ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಉಡುಪಿಯ ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯತೀರ್ಥರು ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ನಂತರ ಬನ್ನಂಜೆ ಗೋವಿಂದಾಚಾರ್ಯರ ವಿರಚಿತ ಚಿಂತನ ರಾಮಾಯಣ ನೃತ್ಯರೂಪಕವನ್ನು ಹುಬ್ಬಳ್ಳಿಯ ನಾಟ್ಯಚಾರ್ಯ ವಿದ್ವಾನ್ ಸುಜಯ್ ಶಾನ್‍ಭೋಗ್ ಮತ್ತು ತಂಡ ಪ್ರಸ್ತುತಪಡಿಸಲಿದೆ ಎಂದರು.
ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಅಭಿರುಚಿ ಸಂಸ್ಥೆ, ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ ಹಾಗೂ ಮಣೂರು ಗೋವಿಂದಾರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಸೇರಿದಂತೆ ಹಲವಾರು ಸಂಸ್ಥೆಗಳು ಸಹಕಾರ ನೀಡುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಆರಾಧ್ಯ, ಕೆ.ಎಲ್. ಉಪಾಧ್ಯಾಯ, ನವ್ಯಶ್ರೀ ನಾಗೇಶ್, ಚೇತನ್, ಡಾ.ನಾಗಮಣಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















