ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ಮತ್ತು ಜಾಗತಿಕವಾಗಿ ಸಿಎ ಅತ್ಯಂತ ಗೌರವಾನ್ವಿತ ಕೋರ್ಸ್ ಆಗಿದೆ ಎಂದು ಬ್ಯಾಂಕಾಕ್ ಎಕಮಾಯ್ ಇಂಟರ್‌ನ್ಯಾಶನಲ್ ಸ್ಕೂಲ್’ನ ವಿನ್’ಸ್ಟನ್ ಅನಿಲ್ ಲೋಬೋ ಅಭಿಪ್ರಾಯಪಟ್ಟರು.
ಪಿಇಎಸ್‌ಐಎಎಮ್‌ಎಸ್ ಕಾಲೇಜಿನ ಸಿಂಥೆಸಿಸ್ ಫೋರಂ ವತಿಯಿಂದ ಸಿಎ ವೃತ್ತಿಯಲ್ಲಿನ ಅವಕಾಶಗಳು, ಸವಾಲುಗಳು ಮತ್ತು ಬೆಳವಣಿಗೆ ಎಂಬ ವಿಷಯದ ಕುರಿತ ವಿಶೇಷ ಉಪನ್ಯಾ¸ದಲ್ಲಿ ಅವರು ಮಾತನಾಡಿದರು.
ಭಾರತ ಮತ್ತು ಜಾಗತಿಕವಾಗಿ ಸಿಎ ಕೋರ್ಸ್ ಅತ್ಯಂತ ಗೌರವಾನ್ವಿತ ಮತ್ತು ಕಠಿಣ ವೃತ್ತಿ ಮಾರ್ಗಗಳಲ್ಲಿ ಒಂದಾಗಿ ಮುಂದುವರೆದಿದೆ. ಚಾರ್ಟ್ರ್ಡ್ ಅಕೌಂಟೆಂಟ್ ಆಗುವ ಹಾದಿ ಸವಾಲಿನದ್ದಾಗಿದೆ ಆದರೆ ಜ್ಞಾನ, ಖ್ಯಾತಿ ಮತ್ತು ವೃತ್ತಿ ಆಯ್ಕೆಗಳ ಷಯದಲ್ಲಿ ಪ್ರತಿಫಲಗಳು ಸಾಟಿಯಿಲ್ಲ ಎಂದು ತಿಳಿಸಿದರು.
ಆಡಿಟ್ ಸಂಸ್ಥೆಗಳು, ತೆರಿಗೆ, ಸಲಹಾ, ಕಾರ್ಪೊರೇಟ್ ಹಣಕಾಸು ಮತ್ತು ಅಂತಾರಾಷ್ಟ್ರೀಯ ಲೆಕ್ಕಪತ್ರ ನಿರ್ವಹಣೆಯಂತಹ ವಿವಿಧ ವಲಯಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಅವರು ಒತ್ತಿ ಹೇಳಿದರು.
ಭಾರತದ ಆರ್ಥಿಕ ಸ್ತರಣೆ ಮತ್ತು ಜಾಗತಿಕ ಏಕೀಕರಣದೊಂದಿಗೆ ಕೌಶಲ್ಯಪೂರ್ಣ ಸಿಎಗಳಿಗೆ ಬೇಡಿಕೆ ಎಂದಿಗಿಂತಲೂ ಹೆಚ್ಚಾಗಿದೆ. ಕಠಿಣ ಪರೀಕ್ಷಾ ರಚನೆ, ಸಮಯದ ನಿರ್ವಹಣೆ ಮತ್ತು ಒತ್ತಡದಂತಹ ಸವಾಲುಗಳನ್ನು ಎತ್ತಿ ತೋರಿಸುತ್ತಾ ದ್ಯಾರ್ಥಿಗಳು ಸಮರ್ಪಣಾ ಮನೋಭಾವ, ಸತತವಾದ ಪರಿಶ್ರಮ ಹಾಗೂ ನಿರ್ದಿಷ್ಠವಾದ ಯೋಜನೆಗಳನ್ನು ರೂಪಿಸಿಕೊಂಡರೆ ಈ ಸವಾಲುಗಳನ್ನು ಗೆಲುನ ಮೆಟ್ಟಿಲುಗಳಾಗಿ ಪರಿವರ್ತಿಸಲು ಸಾಧ್ಯದೆ ಎಂದರು.
ನಿರಂತರವಾದ ಕಲಿಕೆ ನೈತಿಕ ಅಭ್ಯಾಸ ಮತ್ತು ಜಾಗತಿಕ ಆರ್ಥಿಕ ಪ್ರವೃತ್ತಿಗಳೊಂದಿಗೆ ನವೀಕೃತವಾಗಿರುವುದರ ಮಹತ್ವವನ್ನು ಹೇಳಿದರು.
ಕಾರ್ಯಕ್ರಮವು ಸಂವಾದಾತ್ಮಕವಾಗಿ ಹಾಗೂ ಉತ್ಸಾಹಭರಿತವಾಗಿ ನೆರವೇರಿತು. ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ. ಸುದರ್ಶನ್, ನಿರ್ವಹಣಾಶಾಸ್ತç ಭಾಗದ ಮುಖ್ಯಸ್ಥರಾದ ಡಿ.ಮೋಹನ್, ವಾಣಿಜ್ಯಶಾಸ್ತç ಭಾಗದ ಮುಖ್ಯಸ್ಥರಾದ ಡಾ.ಎಚ್.ಆರ್. ಮಂಜುನಾಥ ಹಾಗೂ ಅಧ್ಯಾಪಕ ವೃಂದದವರು ಮತ್ತು ಬಿಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post