ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ದೇಹದಾಢ್ರ್ಯ ಪಟುಗಳ ಸಂಘ, ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿಬಿಲ್ಡರ್ಸ್ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಪಾಲಿಕೆಯಿಂದ ಆಚರಿಸುವ ನಾಡಹಬ್ಬ ಶಿವಮೊಗ್ಗ ದಸರಾದಲ್ಲಿ #Shivamogga Dasara ರಾಜ್ಯ ಮತ್ತು ಜಿಲ್ಲಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಯನ್ನು #Boddy Building Competition ಸೆ.22ರಂದು ಸಂಜೆ 6 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ದೇಹದಾಢ್ರ್ಯ ಪಟುಗಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಯೋಗೀಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ ಪ್ರಾಯೋಜಕತ್ವದಲ್ಲಿ ಯುವದಸರಾ ಶ್ರೀ 2025ರ ಹೆಸರಿನಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿವಿಧ ವಿಭಾಗಗಳಲ್ಲಿ ದೇಹದಾಢ್ರ್ಯ ಸ್ಪರ್ಧೆ ಆಯೋಜಿಸಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯವರು ಮಾತ್ರ ಭಾಗವಹಿಸಬಹುದು. ಉಳಿದಂತೆ ರಾಜ್ಯಮಟ್ಟದ ಸ್ಪರ್ಧೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಬಹುದು ಎಂದರು.

ಹಾಗೆಯೇ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎರಡು ಬಹುಮಾನಗಳನ್ನು ನೀಡಲಾಗುತ್ತದೆ. ಶ್ರೀ ಶಿವಮೊಗ್ಗ ಯುವದಸರಾ ವಿನ್ನರ್‍ಗೆ 6 ಸಾವಿರ, ರನ್ನರ್‍ಗೆ 5 ಸಾವಿರ ಬಹುಮಾನದ ಜೊತೆಗೆ ಪಾರಿತೋಷಕ ನೀಡಲಾಗುವುದು. ಇಲ್ಲಿ 55 ಕೆ.ಜಿ.ಯಿಂದ 80 ಕೆ.ಜಿ.ಯವರೆಗೆ ಸ್ಪರ್ಧೆ ನಡೆಸಲಾಗುವುದು. ಮೂರು ಬಹುಮಾನಗಳನ್ನು ಕ್ರಮವಾಗಿ 2ಸಾವಿರ, 1ವರೆ ಸಾವಿರ ಹಾಗೂ 1 ಸಾವಿರದಂತೆ ನೀಡಲಾಗುವುದು. ನಾಲ್ಕನೇ ಬಹುಮಾನಕ್ಕೆ ಪಾರಿತೋಷಕ ನೀಡಲಾಗುವುದು ಎಂದರು.

ದೇಹದ ತೂಕ ಹಾಗೂ ಹೆಸರು ನೊಂದಾಯಿಸಿಕೊಳ್ಳಲು ಸೆ.22ರ ಮಧ್ಯಾಹ್ನ 2 ಗಂಟೆಯಿಂದ 4ಗಂಟೆಯವರೆಗೆ ಅವಕಾಶವಿದೆ. ಆರು ಗಂಟೆಯ ನಂತರ ಸ್ಪರ್ಧೆಗಳು ಆರಂಭವಾಗುತ್ತವೆ. ಹೆಚ್ಚಿನ ವಿವರಕ್ಕೆ 9972369129ರಲ್ಲಿ ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಶಿವಬಸಪ್ಪ, ಉಪಾಧ್ಯಕ್ಷ ಶರವಣ, ಮುಖ್ಯಸ್ಥರಾದ ವಿಕ್ರಮ್, ಸುರೇಶ್ ಎಂ.ಬಿ. ಪರಶುರಾಮ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















Discussion about this post