ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, ನಿನ್ನೆ ತಡರಾತ್ರಿ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಈ ಬ್ಲಾಕ್ ಮತ್ತು ಪೊಲೀಸ್ ಲೇಔಟ್‍ನಲ್ಲಿ ಕಳ್ಳತನ ಯತ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಪೊಲೀಸ್ ಚೌಕಿಸ್ಥಾಪಿಸುವಂತೆ ಕರವೇ ಸಿಂಹ ಸೇನೆಯು ಜಿಲ್ಲಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು ಈಭಾಗದಲ್ಲಿನ ಜನರಲ್ಲಿ ಆತಂಕ ತರಿಸಿದೆ. ರಾತ್ರಿ ಸಮಯ ಇಲ್ಲಿತಿರುಗಾಡುವದೇ ಕಷ್ಟವಾಗಿದೆ. ಬೆಳಗಿನ ವಿಹಾರದ ವೇಳೆಯೂ ಕಳ್ಳತನ ನಡೆಯುತ್ತಿವೆ. ಕಳ್ಳರಿಗೆ ಇಲ್ಲಿ ಭಯವಿಲ್ಲದಂತಾಗಿದೆ ಎಂದು ಕರವೇ ಸಿಂಹ ಸೇನೆಯು ಆತಂಕ ವ್ಯಕ್ತಪಡಿಸಿದೆ.
ಈ ಹಿಂದೆ ಗೋಪಾಲಗೌಡ ಬಡಾವಣೆಗೆ ಸಂಬಂಧಪಟ್ಟಂತೆ ಪೊಲೀಸ್ ಚೌಕಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ತೆರವುಗೊಳಿಸಲಾಗಿತ್ತು. ತುಂಗಾನಗರ ಪೊಲೀಸ್ ಠಾಣೆಗೆ ಹೆಚ್ಚಿನ ಒತ್ತಡದ ಕೆಲಸವಿದ್ದು ತುಂಬಾ ದೊಡ್ಡ ಕ್ಷೇತ್ರವಾರು ಇರುವುದರಿಂದ ಪೊಲೀಸ್ ಸಿಬ್ಬಂದಿಗಳು ಕಡಿಮೆ ಇರುವ ಕಾರಣ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ ಸದನದಲ್ಲಿ ಈ ಬಾರಿ ಚರ್ಚೆಯನ್ನು ನಡೆಸಿದ್ದರು. ಗೃಹಮಂತ್ರಿಗಳು ಇದರ ಬಗ್ಗೆ ಯಾವುದೇ ತರಹದ ಸಹಕಾರವನ್ನು ನೀಡುತ್ತಿಲ್ಲ ಇದು ಸಾರ್ವಜನಿಕರಿಗೆ ತೊಂದರೆಯಾಗಲು ಮುಖ್ಯ ಕಾರಣವಾಗಿದೆ ಜಿಲ್ಲಾ ರಕ್ಷಣಾಧಿಕಾರಿಗಳು ತತಕ್ಷಣದಲ್ಲಿ ವೃದ್ಧಾಶ್ರಮ, ಪೊಲೀಸ್ ಲೇಔಟ್, ಸ್ವಾಮಿ ವಿವೇಕಾನಂದ ಬಡಾವಣೆ, ಲಗಾನ್ ಕಲ್ಯಾಣ ಮಂದಿರದ ಸುತ್ತ-ಮುತ್ತಲ ಬಡಾವಣೆಗೆ ಹತ್ತಿರವಾಗುವಂತೆ ಒಂದು ಪೊಲೀಸ್ ಚೌಕಿಯನ್ನು ನಿರ್ಮಾಣ ಮಾಡುವುದರ ಮೂಲಕ ಅಲ್ಲಿನ ಜನರ ಭದ್ರತೆಯ ಬಗ್ಗೆ ತತಕ್ಷಣದಲ್ಲಿ ಕಾರ್ಯವನ್ನು ಮಾಡಿಕೊಡಬೇಕೆಂದು ಕರವೇ ಸಿಂಹ ಸೇನೆ ಜಿಲ್ಲಾ ರಕ್ಷಣಾಧಿಕಾರಿಗಳಲ್ಲಿ ಮನವಿಯನ್ನು ಮಾಡಿದೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷರಾದ ರವಿಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವುಲೆ, ಜಿಲ್ಲಾ ಕಾರ್ಯದರ್ಶಿ ನೂರುಲ್ಲಾ, ಜಿಲ್ಲಾ ಸಹಕಾರ್ಯದರ್ಶಿ ರಫೀಕ್, ಜಿಲ್ಲಾ ಉಪಾಧ್ಯಕ್ಷರು ರಘು ನಗರ ಘಟಕದ ಅಧ್ಯಕ್ಷರು ಕಾರ್ತಿಕ್ ಪೂಜಾರಿ, ಭರತ್, ಮತ್ತಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















