ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ #Dharmasthala ಮಾಜಿ ಉಪಮುಖ್ಯಮಂತ್ರಿ, ಹಾಗೂ ರಾಷ್ಟ್ರಭಕ್ತ ಬಳಗದ ನಾಯಕರಾದ ಕೆ.ಎಸ್. ಈಶ್ವರಪ್ಪ #K S Eshwarappa ಅವರ ನೇತೃತ್ವದಲ್ಲಿ ನಾಳೆ ಆಯೋಜಿಸಿರುವ ಧರ್ಮ ರಕ್ಷಾ ಜಾಥಾಕ್ಕೆ ಈಗಾಗಲೇ 150ಕ್ಕೂ ಹೆಚ್ಚು ವಾಹನಗಳು ಸಿದ್ಧಗೊಂಡಿದ್ದು ಸುಮಾರು 700 ರಿಂದ 800 ರಾಷ್ಟ್ರ, ಧರ್ಮದ ಭಕ್ತರ ತಂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ.
ಅಧರ್ಮೀಯರ ವಿರುದ್ಧದ ಈ ಧರ್ಮ ರಕ್ಷಾ ಜಾಥಾಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ಬೆಳಗ್ಗೆ 8:00 ಕೆ.ಎಸ್. ಈಶ್ವರಪ್ಪ ಅವರ ಮನೆಯಲ್ಲಿ ಬೆಣ್ಣೆದೋಸೆ ತಿಂಡಿ ಸೇವಿಸಿದ ನಂತರ ಧರ್ಮ ರಕ್ಷಿಸುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಜಾಥಾ ಹೊರಡಲಿದೆ.
ಈ ಕುರಿತಂತೆ ಮಾತನಾಡಿದ ಕೆ.ಇ. ಕಾಂತೇಶ್, #K E Kanthesh ಶಿವಮೊಗ್ಗದಿಂದ ಕಡೂರು, ಬೀರೂರು, ಚಿಕ್ಕಮಗಳೂರು ಮಾರ್ಗವಾಗಿ ಮೂಡಿಗೆರೆ ಬಳಿ ಒಂದು ಪುಟ್ಟ ವಿರಾಮ ಪಡೆದು ಲಘು ಉಪಹಾರದೊಂದಿಗೆ ಮುಂದೆ ಸಾಗಿ ಮಧ್ಯಾಹ್ನ 1:30ಗೆ ಧರ್ಮಸ್ಥಳಕ್ಕೆ ಈ ಜಾಥಾ ತಲುಪಲಿದೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ ಶ್ರೀ ಮಂಜುನಾಥ ಸ್ವಾಮಿಯ #Shri Manjunatha Swamy ದರ್ಶನ ಪಡೆದು ತುಂಗಾ, ಗಂಗಾ, ನೇತ್ರಾವತಿ ನದಿಯ ತೀರ್ಥವನ್ನು ಹಾಕುವ ಮೂಲಕ ಧರ್ಮವನ್ನು ರಕ್ಷಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದ್ದಾರೆ.
ತದನಂತರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಜೊತೆ ಮಾತನಾಡಿ ಅವರಿಗೆ ಧರ್ಮಕ್ಕೆ ಕಳಂಕ ತರುತ್ತಿರುವವರ ವಿರುದ್ದದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ರಾಷ್ಟç ಭಕ್ತರು ಘೋಷಿಸಿ, ಬೆಂಬಲ ನೀಡಲಿದ್ದಾರೆ. ನಂತರ ಶಿವಮೊಗ್ಗಕ್ಕೆ ಜಾಥಾ ವಾಪಾಸ್ ಆಗಲಿದೆ ಎಂದು ಪ್ರಮುಖರಾದ ವಿಶ್ವಾಸ್ ತಿಳಿಸಿದ್ದಾರೆ.
ನಾಳೆ ಶಿವಮೊಗ್ಗದಿಂದ ಅಪಾರ ಸಂಖ್ಯೆಯ ವಾಹನಗಳು ಹಾಗೂ ರಾಷ್ಟçಭಕ್ತರು ಧರ್ಮಸ್ಥಳಕ್ಕೆ ಜಾಥಾದ ಮೂಲಕ ಹೋಗುವ ಕಾರ್ಯಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post