ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ನಗರಕ್ಕೆ ಬಿ.ವೈ. ವಿಜಯೇಂದ್ರ BYVijayendra ಅವರು ನಾಳೆ ಆಗಮಿಸುತ್ತಿದ್ದು, ನಗರದಲ್ಲಿ ಹಬ್ಬದ ವಾತವರಣ ಉಂಟಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾಳೆ ಬೆಳಿಗ್ಗೆ 10.30ಕ್ಕೆ ತೆರೆದ ವಾಹನದ ಜೊತೆಗೆ ಸುಮಾರು ಎರಡು ಸಾವಿರ ಬೈಕ್ ರ್ಯಾಲಿ ಮೂಲಕ ಬೆಕ್ಕಿನ ಕಲ್ಮಠದಿಂದ ಅಮ್ಮಿರ್‍ಹಮ್ಮದ್ ವೃತ್ತ, ಗೋಪಿ ವೃತ್ತ, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ವೃತ್ತ, ಪಿಇಎಸ್ ಕಾಲೇಜಿನ ಪ್ರೇರಣಾ ಸಭಾಂಗಣದವರೆಗೆ ಅಪಾರ ಅಭಿಮಾನಿಗಳು ಮತ್ತು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಲಿದ್ದು, ಪ್ರೇರಣ ಸಭಾಂಗಣದಲ್ಲಿ ಬೃಹತ್ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
6 ರಿಂದ 7 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, BSYadiyurappa ಸಂಸದ ಬಿ.ವೈ.ರಾಘವೇಂದ್ರ, MPBYRaghavendra ಕೆ.ಎಸ್. ಈಶ್ವರಪ್ಪ, KSEshwarappa ಶಾಸಕ ಅರಗ ಜ್ಞಾನೇಂದ್ರ, Araga Gnanendra ಚೆನ್ನಬಸಪ್ಪ, ಡಿ.ಎಸ್. ಅರುಣ್, ಎಸ್. ರುದ್ರೇಗೌಡ, ಮಾಜಿ ಶಾಸಕರಾದ ಅಶೋಕ್ ನಾಯಕ್, ಹರತಾಳ ಹಾಲಪ್ಪ, ಸ್ವಾಮಿರಾವ್ ಸೇರಿದಂತೆ ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು ಗಣ್ಯರು, ಕಾರ್ಯಕರ್ತರು, ಭಾಗವಹಿಸಲಿದ್ದಾರೆ. ಅಭಿಮಾನದ ಅಭಿನಂದನೆ ಕಾರ್ಯಕ್ರಮದ ನಂತರ ನೂತನ ಅಧ್ಯಕ್ಷರು ಜಿಲ್ಲೆಯ ಹಿರಿಯರ ಮನೆಗೆ ಭೇಟಿ ನೀಡಿ, ಆಶೀರ್ವಾದ ಪಡೆಯಲಿದ್ದಾರೆ. ಈಡೀ ಜಿಲ್ಲೆಯಲ್ಲಿ ಸಂಭ್ರಮ ಸಡಗರದ ವಾತಾವರಣ ನಿರ್ಮಾಣವಾಗಿದೆ. ನಗರದವನ್ನು ನವವಧುವಿನಂತೆ ಸಿಂಗರಿಸಲಾಗಿದೆ. ಶಿವಮೊಗ್ಗ ಜಿಲ್ಲೆಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ್ದು, ಎಲ್ಲರಿಗೂ ಪ್ರೇರಣೆ ನೀಡಿದೆ ಎಂದರು.
ವಿಶೇಷವಾಗಿ ಬಿಜೆಪಿ ಕಾರ್ಯಾಲಯಕ್ಕೆ ಬೇಟಿ ನೀಡಿ ಸಮಾಲೋಚನೆ ನಡೆಸುವುದರ ಜೊತೆಗೆ ಬೂತ್ ಅಧ್ಯಕ್ಷರ ಮನೆಗೆ ಬೇಟಿ ನೀಡಲಿದ್ದಾರೆ. ಸಂಘಟನೆಯ ಕೆಳಸ್ತರದ ಪದಾಧಿಕಾರಿಗಳ ಜೊತೆಗೂ ಚರ್ಚಿಸಲಿದ್ದಾರೆ ಎಂದರು.
ನ.30ರಂದು ಶಿಕಾರಿಪುರದಲ್ಲಿ 20 ಸಾವಿರ ಜನರ ಬಹಿರಂಗ ಸಭೆ ಏರ್ಪಡಿಸಲಾಗಿದೆ. ಅಲ್ಲಿ ನೂತನ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ವಿಜೇಂದ್ರರವರಿಗೆ ಜಿಲ್ಲೆಯ ಪರವಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.
Also read: ಶಿವಮೊಗ್ಗ ಸಿರಿ ವೈಭವ ಗೀತೆಯ ಪ್ರೋಮೊ ಬಿಡುಗಡೆ
ಶಿಕಾರಿಪುರದ ಹಳೆ ಸಂತಕಟ್ಟೆ ಮೈದಾನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದ್ದು, ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಸಭೆಯ ಸ್ಥಳವನ್ನು ತಲುಪಲಿದ್ದಾರೆ ಎಂದರು.
ಸಾರ್ವಜನಿಕರು ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸುವಂತೆ ಅವರು ವಿನಂತಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಶಾಸಕ ಬಾಲಕೃಷ್ಣ ರವರು ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಹಾಗೂ ಪಕ್ಷದ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಬ್ರಿಟಿಷರ ಕಾಲದ ಆಡಳಿತ ಎಂದಿದ್ದಾರೆ. ಪುಲ್ವಾಮ ದಾಳಿ ರಾಜಕೀಯ ದುರುದ್ದೇಶದ್ದು ಎಂಬ ಹೇಳಿಕೆ ನೀಡಿದ್ದಾರೆ. ಇದು ಪುಲ್ವಾಮ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಮಾಡಿದ ಅವಮಾನ. ದೇಶದ ಸವಾಲಿನ ಮತ್ತು ಇಕ್ಕಟ್ಟಿನ ಸ್ಥಿತಿಯಲ್ಲಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ ಪ್ರಧಾನಿಯ ಬಗ್ಗೆ ಈ ರೀತಿಯ ಹೇಳಿಕೆ ವಾಪಾಸ್ಸು ಪಡೆಯಬೇಕು. ಬಹಿರಂಗ ಕ್ಷಮೆ ಕೇಳಬೇಕು ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಸಮಸ್ಯೆಗಳಲ್ಲಿ ಸಿಕ್ಕಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಬಿಜೆಪಿ ಯಾವತ್ತು ಕ್ಷುಲಕ್ಕ ರಾಜಕಾರಣ ಮಾಡುವುದಿಲ್ಲ. ಅಂತ ಅಗತ್ಯವೂ ಬಿಜೆಪಿ ಇಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಚೆನ್ನಬಸಪ್ಪ, ಡಿ.ಎಸ್. ಅರುಣ್, ಎಸ್. ರುದ್ರೇಗೌಡ ಪ್ರಮುಖರಾದ ಕೆ.ಬಿ. ಅಶೋಕ್ ನಾಯಕ್, ಎಸ್. ದತ್ತಾತ್ರಿ, ಶಿವರಾಜ್, ಶ್ರೀನಾಥ್, ರತ್ನಾಕರ್ ಶೆಣೈ, ಅಣ್ಣಪ್ಪ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post