ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಮೊದಲ ಎಫ್.ಎಂ. ರೇಡಿಯೋಗೆ FM Radio ಏ.22ರ ಶುಕ್ರವಾರ ಚಾಲನೆ ದೊರೆಯಲಿದ್ದು, ಎಫ್. ಎಂ 90.8 ಮಲೆನಾಡಿನಲ್ಲಿ ತನ್ನ ಪ್ರಸಾರ ಕಾರ್ಯ ಆರಂಭಿಸಲಿದೆ ಎಂದು ಎಫ್. ಎಂ ರೇಡಿಯೋ ನಿಲಯ ನಿರ್ದೇಶಕ ಜಿ. ಎಲ್. ಜನಾರ್ಧನ ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಸಮುದಾಯ ಬಾನುಲಿ ಕೇಂದ್ರ, ಕೊಡಚಾದ್ರಿ ಸಮಗ್ರ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ರೇಡಿಯೋ ಶಿವಮೊಗ್ಗ ಈಗಾಗಲೇ ಪ್ರಾಯೋಗಿಕ ಪ್ರಸಾರ ಆರಂಭಿಸಿದ್ದು, ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆಯ ತನಕ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ಹೇಳಿದರು.
ರೇಡಿಯೋ ವಿಶೇಷ ತರಂಗಾಂತರಗಳು ಮತ್ತು ಆನ್‌ಲೈನ್ ಮೂಲಕ ಎಫ್. ಎಂ. ರೇಡಿಯೋ ಕಾರ್ಯಕ್ರಮಗಳನ್ನು ಕೇಳಬಹುದಾಗಿದ್ದು, ಸುಮಾರು 30 ಕಿ. ಮೀ. ದೂರದ ತನಕ ಇದರ ಪ್ರಸಾರವನ್ನು ಕೇಳಬಹುದಾಗಿದೆ. ಶಿವಮೊಗ್ಗ ಎಫ್. ಎಂ ರೇಡಿಯೋ ಡೌನ್‌ಲೋಡ್ ಮಾಡಿಕೊಂಡು ಸಹ ಜನರು ಕಾರ್ಯಕ್ರಮಗಳನ್ನು ಕೇಳಬಹುದಾಗಿದೆ. ನಗರದ ಉದ್ಯಮಿಗಳು ರೇಡಿಯೋ ಮೂಲಕ ಜಾಹೀರಾತುಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಎಂದರು.
Also read: 50 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಟೆಂಡರ್ ಗಳ ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ: ಸಿಎಂ
ಶಿಕ್ಷಣ, ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ, ಸಂಗೀತ, ಕ್ರೀಡೆ, ಕೃಷಿ, ವಾಣಿಜ್ಯ, ಉದ್ಯೋಗ, ಕೈಗಾರಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ವಿವರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post