ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಸಲಾಯಿತು.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಎ ಜಿ ಕಾರ್ಯಪ್ಪ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಅಧೀಕ್ಷಕ ಬಾಬು ಆಂಜನಪ್ಪ, ಆರ್‌ಎಎಫ್ ಅಸ್ಸಿಸ್ಟೆಂಟ್ ಕಮಾಂಡೆಂಟ್ ರಾಜೇಶ್ ರವರ ನೇತೃತ್ವದಲ್ಲಿ ಕೋಟೆ ಪೊಲೀಸ್ ಠಾಣಾ ಆವರಣದಿಂದ ಪಥ ಸಂಚಲನ ಪ್ರಾರಂಭಿಸಲಾಯಿತು.
ಬಳಿಕ ಮಾರಿಕಾಂಬ ದೇವಸ್ಥಾನದ ರಸ್ತೆ, ಅಶೊಕ ರಸ್ತೆ, ಲಷ್ಕರ್ ಮೊಹಲ್ಲಾ, ತಿರುಪಳ್ಳಯ್ಯನ ಕೇರಿ, ಆರ್ ಎಸ್ ಪಾರ್ಕ್, ನಾಗಪ್ಪ ಕೇರಿ, ದೀಪಕ್ ಪೆಟ್ರೋಲ್ ಬಂಕ್, ಎಸ್ ಎನ್ ವೃತ್ತ, ಎ ಎ ವೃತ್ತ, ಓಟಿ ರಸ್ತೆ, ಎಂಕೆಕೆ ರಸ್ತೆ, ಸಿದ್ದಯ್ಯ ವೃತ್ತ,ಭರ್ಮಪ್ಪ ನಗರದಿಂದ ಎ. ಎ. ವೃತ್ತಕ್ಕೆ ಬಂದು ಮುಕ್ತಾಯ ಮಾಡಲಾಯಿತು.
ಕೋಟೆ ಠಾಣೆ ಪೊಲೀಸ್ ನಿರೀಕ್ಷಕ ಹರೀಶ್ ಕೆ ಪಟೇಳ್, ದೊಡ್ಡಪೇಟೆ ಠಾಣೆ ನಿರೀಕ್ಷಕ ರವಿ ಪಾಟೀಲ್, ಜಯನಗರ ಠಾಣೆ ನಿರೀಕ್ಷಕ ಸಿದ್ಧೇಗೌಡ ಹಾಗೂ ಶಿವಮೊಗ್ಗ ನಗರದ ಪೊಲೀಸ್ ಉಪ ನಿರೀಕ್ಷಕರು, ಸಿಬ್ಬಂದಿಗಳು, ಆರ್‌ಎಎಫ್ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















