ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೋವಿನ ರಕ್ಷಣೆಗಾಗಿ ಸಮಾನ ಮನಸ್ಕರೆಲ್ಲರೂ ಸೇರಿ ಶಿವಮೊಗ್ಗದಲ್ಲಿ ಗೋವರ್ಧನಾ ಎಂಬ ಸಂಸ್ಥೆಯನ್ನು ಅಸ್ವಿತ್ವಕ್ಕೆ ತಂದಿದ್ದು, ಮನೆ ಮನೆಗಳಲ್ಲಿ ಗೋವಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಶೃಂಗೇರಿ ಜಗದ್ಗುರುಗಳು ಅ.5ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಗೋವರ್ಧನದ ಪರವಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ರಸ್ತೆಗಳಲ್ಲಿ ಮಾಲೀಕರಿಲ್ಲದೆ ಓಡಾಡುವ ಬಿಡಾಡಿ ಹಸುಗಳನ್ನು ರಕ್ಷಿಸಿ, ಗೋಶಾಲೆಗೆ ಸೇರಿಸುವುದು, ಅನಾಥ ಗೋವುಗಳಿಗಾಗಿಯೇ ಸುಸಜ್ಜಿತ ಪಶುವೈದ್ಯಕೀಯ ಆಸ್ಪತ್ರೆಯನ್ನು ಸ್ಥಾಪಿಸಿ ನುರಿತ ವೈದ್ಯರುಗಳನ್ನು ನೇಮಿಸುವುದು, ಅನಾರೋಗ್ಯಪೀಡಿತ ಅಪಘಾತದಲ್ಲಿ ಗಾಯಗೊಂಡು ಗೋವುಗಳಿಗಾಗಿ ತುರ್ತು ಆ್ಯಂಬುಲೆನ್ಸ್ ಸೇವೆ ಆರಂಭಿಸುವುದು, ಬಂಜೆತನ ಹಾಗೂ ವಯಸ್ಸಾದ ಹಸುಗಳನ್ನು ಮಾರಾಟ ಮಾಡಲು ಬಿಡದೇ ನಾವೇ ಪಡೆದು, ಗೋ ಶಾಲೆಗಳಿಗೆ ಕೊಡುವುದು ಇಂತಹ ಹತ್ತು-ಹಲವು ಗೋಸಂರಕ್ಷಣೆಗಾಗಿ ನಡೆಯುವ ಎಲ್ಲಾ ಖರ್ಚು-ವೆಚ್ಚಗಳನ್ನು ಗೋವರ್ಧನ ಸಂಸ್ಥೆಯಿಂದಲೇ ಭರಿಸುವುದು ಇದಕ್ಕಾಗಿ ಒಬ್ಬ ಗೋಪ್ರೇಮಿಯಿಂದ ಪ್ರತಿ ತಿಂಗಳು 100 ರೂ.ಗಳನ್ನು ಸ್ವೀಕರಿಸಿ ಇದರ ಮೇಲ್ವಿಚಾರಣೆಗಾಗಿ ಗೋವರ್ಧನ ಎಂಬ ಟ್ರಸ್ಟ್ ಪ್ರಾರಂಭಿಸಿ, ಹಣ ಸಂಗ್ರಹಣೆ, ಖರ್ಚು-ವೆಚ್ಚಗಳ ಜವಾಬ್ದಾರಿ ನೀಡುವುದು ನಿಯಮಿತವಾಗಿ ಟ್ರಸ್ಟಿನ ಸಭೆ ನಡೆಸಿ, ಆಗು-ಹೋಗುಗಳ ಬಗ್ಗೆ ಚಚಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವುದರ ಮೂಲಕ ನಿರಂತರವಾಗಿ ಗೋಸಂರಕ್ಷಣಾ ಕಾರ್ಯವನ್ನು ಮುಂದುವರಿಸುವ ವಿಶೇಷ ಯೋಜನೆ ಇದಾಗಿದೆ ಎಂದರು.

ಇದೊಂದು ಜನಾಂದೋಲನ ಕಾರ್ಯಕ್ರಮವಾಗಲಿದ್ದು, ನೇರವಾಗಿ ಬ್ಯಾಂಕ್ ಖಾತೆಗೂ ಹಣ ಜಮಾಮಾಡಬಹುದು ಎಂದರು.
ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ ಮಾತನಾಡಿ, ಗೋವು ಜೀವಂತ ದೇವರಾಗಿದ್ದು, ನಮಗೆಲ್ಲರಿಗೂ ಪೂಜ್ಯಭಾವನೆ ಇದೆ. ನಡೆದಾಡುವ ದೇವರಾಗಿದ್ದು, ನಾವು ಬಹುಸಂಖ್ಯಾತರಾಗಿದ್ದರೂ ಕೂಡ ಗೋಹತ್ಯೆ ತಡೆಯುವಲ್ಲಿ ವಿಫಲರಾಗಿದ್ದೇವೆ. ಗೋವಧೆ ಮಾಡುವವರಿಗೆ ಕೊಲೆ ಅಪರಾಧಿಗೆ ನೀಡುವ ಶಿಕ್ಷೆಯನ್ನು ನೀಡುವ ಕಾನೂನು ತರಬೇಕು ಎಂದರು.

ಶೇಷಾಚಲ ಮಾತನಾಡಿ, ಶಿವಮೊಗ್ಗದಲ್ಲಿ 100ಕ್ಕೂ ಹೆಚ್ಚು ಸ್ವಯಂಸೇವಾ ಸಂಸ್ಥೆಗಳು ಮತ್ತು ದೇವಾಲಯಗಳು ಈ ಕಾರ್ಯಕ್ಕೆ ಸಹಕರಿಸಲು ಮುಂದೆ ಬಂದಿದ್ದು, ಸುಮಾರು 5000 ಮನೆಗಳನ್ನು ಸಂಪರ್ಕಿಸುವ ಯೋಚನೆ ಇದೆ ಎಂದರು.
ಗೋಸಂರಕ್ಷಣೆಗಾಗಿ ರೂ. 100 ಪ್ರತಿ ತಿಂಗಳು ಕೊಟ್ಟು ಗೋಸಂರಕ್ಷಕನಾಗುತ್ತೇನೆ ಎಂದು ಬಯಸುವವರು ಕೆ.ಎಸ್. ಈಶ್ವರಪ್ಪ, ಮೊ. 9880030004, ನಟರಾಜ್ ಭಾಗವತ್ ಮೊ. 7204646175, ಉಮೇಶ್ ಆರಾಧ್ಯ ಮೊ. : 9886177311, ನಾಗರಾಜ್ (ಗುರುಗುಹ ಸಂಗೀತ ಶಾಲೆ) ಮೊ. : 9448241149, ರುದ್ರಾರಾಧ್ಯ ಮೊ. : 9448161749, ಉಮಾಪತಿ ಮೊ. : 9880172345, ಪರೋಪಕಾರಂ ಶ್ರೀಧರ್ ಮೊ.: 9448238926 ಇವರನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಹಾಲಿಂಗಯ್ಯ ಶಾಸ್ತ್ರೀ, ಕೆ.ಈ. ಕಾಂತೇಶ್, ಗುತ್ತಿಗೆದಾರ ಶಿವಶಂಕರ್, ಭಜನಾ ಪರಿಷತ್‍ನ ಸಂದೇಶ್ ಉಪಾಧ್ಯ, ಗುರುರಾಜ್, ಸುರೇಶ್ ಬಾಳೆಗುಂದಿ, ಸುಧೀಂದ್ರ, ದಿನೇಶ್‍ದಾಸ್ ವೈಷ್ಣವ್, ರಾಜು, ಶಿವಾಜಿ, ನರೇಶ್ ಜೈನ್, ಹರ್ಷಾ ಕಾಮತ್, ಶಿವಾಜಿ, ಗಜಾನನ ಶರ್ಮ, ಆಸ್ವತ್ಥ್ ನಾರಾಯಣ್ ಶೆಟ್ಟಿ ಮತ್ತಿರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post