ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಮಧ್ಯೆ ಭಾಗದಲ್ಲಿರುವ ಪ್ರತಿಷ್ಠಿತ ಬಡಾವಣೆಗಳಾದ ರವೀಂದ್ರ ನಗರ ಹಾಗೂ ರಾಜೇಂದ್ರ ನಗರದ ನಡುವೆ ಹರಿದು ಹೋಗುವ ಚಾನಲ್ ಚರಂಡಿ ರೀತಿಯಲ್ಲಿ ಕೊಳೆತು ನಾರುತ್ತಿದ್ದು, ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ರಾಜೇಂದ್ರ ನಗರ ಹಾಗೂ ರವೀಂದ್ರ ನಗರದ ಬಳಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಂದರವಾದ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಪಕ್ಕದಲ್ಲೇ ಇರುವ ಚಾನಲ್ ಚರಂಡಿ ರೀತಿಯಲ್ಲಿ ಗಬ್ಬೆದ್ದು ನಾರುತ್ತಿದ್ದು, ಇದರ ದುರ್ನಾಥಕ್ಕೆ ಈ ಪಾರ್ಕ್’ನಲ್ಲಿ ಓಡಾಡುವುದು ಅಸಾಧ್ಯವಾಗಿದೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಅಲ್ಲದೇ, ಸೊಳ್ಳೆ ಕಾಟದ ಜೊತೆಗೆ ನಾಗರಿಕರು ಇಲ್ಲಿಯ ಸುತ್ತಮುತ್ತ ವಾಸ ಮಾಡಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯರು ಕಿಡಿ ಕಾರಿದ್ದಾರೆ.
Also read: ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ನೋಂದಣಿ ಕಡ್ಡಾಯವೇ: ಗೃಹ ಸಚಿವ ಪರಮೇಶ್ಚರ್ ಹೇಳಿದ್ದೇನು?
ಅತ್ತ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವು ಇಲ್ಲದೆ, ಇತ್ತ ಸಂಬAಧ ಪಟ್ಟ ಅಧಿಕಾರಿಗಳು ಗಮನಹರಿಸದಿರುವುದು ಈ ಬಡಾವಣೆಗಳ ಮದ್ಯೆ ಹರಿದು ಹೋಗಿರುವ ಈ ಚಾನಲ್ ಭೂಲೋಕದ ನರಕ ಎಂದೇ ಹೇಳಬಹುದಾಗಿದೆ.
ಇನ್ನಾದರೂ ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ನಗರದ ನಾಗರಿಕರು ಅನುಭವಿಸುತ್ತಿರುವ ಗೋಳಿಗೆ ಸ್ಪಂದಿಸುತ್ತಾರೆಯೇ? ಕಾದು ನೋಡಬೇಕು??
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post