ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಊರು, ಊರಿನ ಹಿತ ಹಾಗೂ ತನ್ನೆಲ್ಲಾ ಬಂಧು, ಸ್ನೇಹಿತರಿಗಾಗಿ ನಗರದ ಅರ್ಚಕ ಪವನ್ ಕುಮಾರ್ ಎನ್ನುವವರು ನಗರದಿಂದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ #Shri Raghavendra Swamy Mutt ಪಾದಯಾತ್ರೆ ಆರಂಭಿಸಿದ್ದಾರೆ.
ಇಂದು ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಮಂತ್ರಾಲಯದ #Manthralaya ಶ್ರೀ ರಾಯರ ಮಠಕ್ಕೆ 11 ದಿನಗಳ ಕಾಲ ಪಾದಯಾತ್ರೆಯನ್ನು ಪವನ್ ಕುಮಾರ್ ಕೈಗೊಂಡರು.
Also read: ಸುಪ್ರೀಂ ತೀರ್ಪು ಉಲ್ಲಂಘಿಸಿ ಸಿಎಂ ಪತ್ನಿಗೆ ನಿವೇಶನ | ಸಿದ್ದರಾಮಯ್ಯ ರಾಜೀನಾಮೆಗೆ ಟಿ.ಡಿ. ಮೇಘರಾಜ್ ಆಗ್ರಹ

ಒಟ್ಟು 360 ಕಿಮೀ ಪಾದಯಾತ್ರೆ ಇದಾಗಿದ್ದು, 11 ದಿನಗಳ ಕಾಲ ಅಂದರೆ ಇದೇ ತಿಂಗಳ 23 ಅಥವಾ 24ರಂದು ಮಂತ್ರಾಲಯ ತಲುಪಲಿದ್ದೇನೆ. ಅಲ್ಲಿ ರಾಯರ ಸೇವೆ ಮಾಡಿ ಅಲ್ಲಿಂದ ಕಾಶಿ ಸೇರಿದಂತೆ ವಿವಿಧ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ತೆರಳಲಿದ್ದೇನೆ ಎಂದರು.
ಅವರ ಆಪ್ತರು ಪವನ್ ಕುಮಾರ್ ಅವರನ್ನು ಆತ್ಮೀಯವಾಗಿ ಹಾರೈಸಿ ಬೀಳ್ಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post