ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರೋಪಿ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ವರದಿಯಾದ ಬಳಿಕ ಇದೀಗ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕಟ್ಟುನಿಟ್ಟಿನ ಶಿಸ್ತು ಪಾಲಿಸಲಾಗುತ್ತಿದೆ. ಹೀಗಾಗಿ ಈವರೆಗೆ ಕೆಲವು ಸೌಲಭ್ಯ ಪಡೆಯುತ್ತಿದ್ದ ಕೈದಿಗಳು ಇದೀಗ ಜೈಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಬೀಡಿ ಸಿಗುತ್ತಿಲ್ಲ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ. ಸೋಗಾನೆ ಬಳಿ ಇರುವ ಕೇಂದ್ರ ಕಾರಗೃಹದಲ್ಲಿಯೂ ದರ್ಶನ್ ಪ್ರಕರಣದ ನಂತರ ಜೈಲು ವ್ಯವಸ್ಥೆಯನ್ನು ಕಠಿಣ ಮಾಡಲಾಗಿದೆ. ಹೀಗಾಗಿ ಇದೀಗ ಬೀಡಿ ನೀಡದ ಹಿನ್ನೆಲೆಯಲ್ಲಿ ಕೈದಿಗಳು ಬೀಡಿ ನೀಡಲು ಆಗ್ರಹಿಸುತ್ತಿದ್ದಾರೆ.
ತಂಬಾಕು, ಗುಟ್ಕಾ ಕೊಡಿ:
ಬೆಳಗಾವಿ ಜೈಲು ಕೈದಿಗಳ ರಂಪ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲೂ ತಂಬಾಕು, ಪಾನ್ ಬೀಡಾ, ಗುಟ್ಕಾ ನೀಡುವಂತೆ ಆಗ್ರಹಿಸಿ ಜೈಲಿನ ಕೈದಿಗಳು ಹಾಗೂ ವಿಚಾರಣಾಧೀನ ಕೈದಿಗಳು ಬೆಳಗಿನ ಉಪಾಹಾರ ತ್ಯಜಿಸಿ ಪ್ರತಿಭಟನೆ ನಡೆಸಿದ್ದಾರೆ.
Also read: ಕರ್ನಾಟಕ ಏಕೀಕರಣಕ್ಕೆ ಮಂಡ್ಯದ ಕೊಡುಗೆ ಅಪಾರ: ಬಸವರಾಜ ಬೊಮ್ಮಾಯಿ
ಜೈಲಿನಲ್ಲಿ ಪೂರೈಕೆ ಆಗುತ್ತಿದ್ದ ಗುಟ್ಕಾ, ತಂಬಾಕು, ಪಾನ್ ಬೀಡಾ ನಿಷೇಧಿಸಿದ್ದರಿಂದ ತಮಗೆ ಊಟ, ಉಪಾಹಾರ ಬೇಡ. ಆದರೆ ಕಡ್ಡಾಯವಾಗಿ ತಂಬಾಕು, ಪಾನ್ ಬೀಡಾ ನೀಡುವಂತೆ ಆಗ್ರಹಿಸಿದ್ದಾರೆ.
ತಂಬಾಕು, ಪಾನ್ ಬೀಡಾ ಇಲ್ಲದಿದ್ದರೆ ನಾವು ಬದುಕುವುದು ಕಷ್ಟ. ಊಟ, ಉಪಾಹಾರ ಬಿಡುತ್ತೇವೆ, ಹೊರತು ಪಾನ್ ಬೀಡಾ, ತಂಬಾಕು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಜೈಲಿನಲ್ಲಿ ಪಾನ್ ಬೀಡಾ, ತಂಬಾಕು ಒದಗಿಸದಿದ್ದರೆ ಜೈಲಿನ ಹೊರಗೂ ಅವುಗಳನ್ನು ನಿಷೇಧಿಸಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನೂ ತ್ಯಜಿಸುತ್ತೇವೆ ಎಂದು ಕೈದಿಗಳು ಎಚ್ಚರಿಕೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post