ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯತೆಯ ಉನ್ನತಿಗೆ ವಿದ್ಯಾರ್ಥಿ ದೆಸೆಯಿಂದಲೆ ಸ್ಪರ್ಧೆಗಳಲ್ಲಿ ಮುಕ್ತವಾಗಿ ಭಾಗವಹಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು.
ನಗರದ ಎನ್‌ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ʼಆವಿಷ್ಕಾರ-2025ʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Also read: ಶಿಕಾರಿಪುರ | ಮನೋದೌರ್ಬಲ್ಯ ದೂರವಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿ | ವಿಶ್ವನಾಥ್ ಕರೆ
ಕುಶ ಎಂದರೆ ಹುಲ್ಲು. ಎರಡು ಕಡೆ ಹರಿತವಾಗಿರುವ ಹುಲ್ಲುಗಳನ್ನು ಜೋಪಾನವಾಗಿ ಕಟಾವು ಮಾಡುವ ಪ್ರಕ್ರಿಯೆನ್ನು ಕೌಶಲ್ಯತೆ ಎಂದು ಮೊದಲ ಬಾರಿ ವ್ಯಾಖ್ಯಾನಿಸಲಾಯಿತು. ಅಂತಹ ಕೌಶಲ್ಯತೆಯು ವಿದ್ಯೆಯ ಜೊತೆಗಿನ ಅತ್ಯವಶ್ಯಕ ಸಾಧನವಾಗಿ ರೂಪಗೊಂಡಿದೆ. ಸಂವಹನ ಕೌಶಲ್ಯತೆ ನಿವರ್ಹಣಾ ಕ್ಷೇತ್ರದಲ್ಲಿ ಅತಿ ಮುಖ್ಯವಾಗಿದೆ. ನಿರ್ವಹಣೆ ಮತ್ತು ಆಡಳಿತದ ನಡುವೆ ವ್ಯತ್ಯಾಸವಿದೆ. ಆಡಳಿತ ಕ್ಷೇತ್ರ ಕಾರ್ಯನೀತಿಯನ್ನು ರೂಪಿಸಿದರೆ, ನಿರ್ವಹಣಾ ಕ್ಷೇತ್ರ ರೂಪಗೊಂಡ ನೀತಿಯನ್ನು ಅನುಷ್ಟಾನಗೊಳಿಸುವಲ್ಲಿ ಕಾರ್ಯನಿರ್ವಹಿಸಲಿದೆ. ನಿರ್ವಹಣಾ ಕೌಶಲ್ಯತೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಳ್ಳಲು, ನಿರ್ವಹಣಾ ಕ್ಷೇತ್ರದ ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ.ಕೆ.ಎಲ್.ಅರವಿಂದ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಸ್ಪರ್ಧೆಗಳಾದ ಬೆಸ್ಟ್ ಸಿಇಓ, ಕ್ವಿಜ್, ಮಾರ್ಕೆಟಿಂಗ್, ಫೈನಾನ್ಸ್, ಟ್ರೆಷರ್ ಹಂಟ್, ಮೈಮ್ ಮೇಕಿಂಗ್, ಸ್ಟಾಂಡ್ ಅಪ್ ಕಾಮಿಡಿ, ಪೆಯಿಂಟಿಂಗ್, ವಿಲಾಗ್ ಮೈಮ್ ಮೆಕಿಂಗ್, ಐಸ್ ಬ್ರೇಕಿಂಗ್, ಫನ್ ಟೆಕ್ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post