ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸೋಮಿನಕೊಪ್ಪ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಎದುರಿನ ಚೌಡಮ್ಮ ದೇವಸ್ಥಾನದಲ್ಲಿ ಕಳವು ಮಾಡಿರುವ ಘಟನೆ ನಡೆದಿದೆ.
ದೇವಾಲಯದ ಬಾಗಿಲ ಬೀಗ ಒಡೆದು ಹುಂಡಿ ಮತ್ತು ದೇವರ ಮುಕುಟವನ್ನು ಕಳವು ಮಾಡಲಾಗಿದೆ. ಪಕ್ಕದ ಅಂಗಡಿಯ ಕಲ್ಲಂಗಡಿ ವ್ಯಾಪಾರಸ್ಥರೋರ್ವರು ಹೊರಭಾಗದಲ್ಲಿ ಮಲಗಿದ್ದರೂ ಅವರ ಗಮನಕ್ಕೆ ಬಾರದೆ ಘಟನೆ ನಡೆದಿರುವುದು ಆಶ್ಚರ್ಯವೆನಿಸಿದೆ ಎನ್ನಲಾಗಿದೆ.
ದೇವಸ್ಥಾನದ ಹುಂಡಿ ತೆಗೆದು ಹಣ ಖಾಲಿ ಮಾಡಿ ಎಂದು ಪೊಲೀಸರು ಸಾಕಷ್ಟು ಬಾರಿ ಸೂಚಿಸಿದ್ದರೂ, ಹಣವನ್ನು ಹಾಗೆಯೇ ಬಿಟ್ಟಿದ್ದರ ಪರಿಣಾಮ, ದೊಡ್ಡ ಮೊತ್ತದ ಹಣ ಕಳುವಾಗಿರುವುದಾಗಿ ಸ್ಥಳೀಯರು ದೂರುತ್ತಿದ್ದಾರೆ. ತಿಳಿದುಬಂದಿದೆ.
ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post