ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಹೊರವಲಯದ ವಾದಿ ಎ ಹುದಾ ಪ್ರದೇಶದಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೆ ರಚಿಸಲಾಗಿದ್ದ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆಯನ್ನು, ಜು. 3 ರಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ಆಡಳಿತವು ಪೊಲೀಸ್ ಭದ್ರತೆಯಲ್ಲಿ ನಡೆಸಿತು.
ಜೆಸಿಬಿಯ ಮೂಲಕ ಚರಂಡಿ ಮತ್ತಿತರ ಅಭಿವೃದ್ದಿ ಕಾರ್ಯಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ನಗರ ಯೋಜನಾ ನಿರ್ದೇಶಕರಾದ ಶಂಕರ್, ನಗರ ಯೋಜಕರಾದ ಪ್ರಜ್ವಲ್, ಎಇಇ ಬಾಲರಾಜ್, ಎಇ ಗಂಗಾಧರ ಸ್ವಾಮಿ, ಸರ್ವೇಯರ್ ವೇಣು ಉಪಸ್ಥಿತರಿದ್ದರು.
ಅನಧಿಕೃತವಾಗಿ ಲೇಔಟ್ ರಚನೆ ಮಾಡಿರುವ ವಿಷಯ ಪ್ರಾಧಿಕಾರದ ಗಮನಕ್ಕೆ ಬಂದಿತ್ತು. ಸಭೆಯಲ್ಲಿಯೂ ಚರ್ಚೆಯಾಗಿ, ಅನುಮತಿ ಪಡೆಯದೆ ರಚಿಸಲಾಗಿದ್ದ ಲೇಔಟ್ ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಪ್ರಾಧಿಕಾರದ ಆಯುಕ್ತ ಮೂಕಪ್ಪ ಕರಭೀಮಣ್ಣರವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post