ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2024 ಕಳೆದ 2025ರ ಹೊಸ ವರ್ಷ #New Year 2025 ಆರಂಭಗೊಂಡಿದ್ದು, ನಿನ್ನೆ ತಡರಾತ್ರಿ ನಗರದಲ್ಲಿ ಹೊಸ ವರ್ಷಾಚರಣೆ ಅದ್ದೂರಿಯಾಗಿ ನಡೆಯಿತು.
ನಗರದ ಕ್ಲಬ್, ಹೊಟೇಲ್ ಹಾಗೂ ರೆಸ್ಟೋರೆಂಟ್’ಗಳನ್ನು ಹೊಸ ವರ್ಷಾಚರಣೆಯನ್ನು #New Year Celebration ಸಂಭ್ರಮದಿಂದ ನಡೆಸಲಾಗಿದ್ದು, ಜನರು ಅದ್ದೂರಿಯಾಗಿ ನೂತನ ವರ್ಷವನ್ನು ಸ್ವಾಗತಿಸಿದರು.

ಕೇಕ್ ಕತ್ತರಿಸಿ ಸಂಭ್ರಮಿಸಿದ ಎಸ್’ಪಿ
ಇನ್ನು, ಹೊಸ ವರ್ಷಾಚರಣೆಯ ವೇಳೆ ಯಾವುದೇ ರೀತಿಯಲ್ಲೂ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
Also read: ಮೈಸೂರು ಇನ್ಫೋಸಿಸ್ ಆವರಣದಲ್ಲಿ ಚಿರತೆ | ಸೆರೆ ಕಾರ್ಯಾಚರಣೆ | ಪತ್ತೆಗೆ ಡ್ರೋನ್ ಕ್ಯಾಮರಾ ಬಳಕೆ
ಇದೇ ವೇಳೆ, ನಗರದ ಶಿವಪ್ಪ ನಾಯಕ ವೃತ್ತದ ಬಳಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ #SP Mithun Kumar ಅವರು ತಮ್ಮ ಸಿಬ್ಬಂದಿಗಳೊಂದಿಗೆ ಹೊಸ ವರ್ಷಾಚರಣೆ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿ ವರ್ಷವೂ ಸಿಬ್ಬಂದಿಗಳೊಂದಿಗೆ ಹೊಸ ವರ್ಷಾಚರಣೆ ನಡೆಸುತ್ತಾರೆ. ಈ ಬಾರಿಯೂ ಸಹ ಅದೇ ರೀತಿ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಆಚರಿಸಿದ್ದಾರೆ.
ಎಸ್’ಪಿ ಅವರೊಂದಿಗೆ ಎಎಸ್’ಪಿ ಅನಿಲ್ ಕುಮಾರ್ ಭುಮರೆಡ್ಡಿ, ಪಿಐ ಗುರುರಾಜ್ ಸೇರಿದಂತೆ ಹಲವು ಅಧಿಕಾರಿ ಹಾಗೂ ಸಿಬ್ಬಂದಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post