ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಾಡಿನ ಹಿರಿಯ ಪತ್ರಕತ೯ರು, ಕನಾ೯ಟಕ ರಾಜ್ಯ ಕಾಯ೯ನಿರತ ಪತ್ರಕತ೯ರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಮಾಜಮುಖಿ ಚಿಂತಕರೂ ಆದ ಗುಡಿಹಳ್ಳಿ ನಾಗರಾಜರವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘ, ಶಿವಮೊಗ್ಗ ಪ್ರಸ್ ಟ್ರಸ್ಟ್ ತೀವ್ರ ಸಂತಾಪ ಸೂಚಿಸಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಸಂಬಂಧವಾಗಿ ನಡೆದ ತುತು೯ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಪತ್ರಕತ೯ ಆರ್. ಎಸ್. ಹಾಲಸ್ವಾಮಿಯವರು, ರಂಗಭೂಮಿ, ಪತ್ರಿಕಾ ಕ್ಷೇತ್ರಕ್ಕೆ ಗುಡಿಹಳ್ಳಿ ನಾಗರಾಜ್ ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸಿದರು.
ಶಿವಮೊಗ್ಗ ಜಿಲ್ಲಾ ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್ ರವರು ಮಾತನಾಡಿ, ಸಂಘಟನೆಯ ಬಲವಧ೯ನೆಗೆ ಗುಡಿಹಳ್ಳಿಯವರ ಅವಿರತ ಸೇವೆಯನ್ನು ಸ್ಮರಿಸಿದರು.
ಸಂತಾಪ ಸೂಚಕ ಸಭೆಯಲ್ಲಿ ರಾಜ್ಯ ಪತ್ರಕತ೯ರ ಸಂಘದ ನಿದೇ೯ಶಕ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾಯ೯ದಶಿ೯ ವೈದ್ಯ, ನಗರ ಕಾಯ೯ದಶಿ೯ ವಿ. ಟಿ. ಅರುಣ್, ಭಂಡಿಗಡಿ ನಂಜುಂಡಪ್ಪ, ನಾ. ರಾ. ವೆಂಕಟೇಶ್, ಹುಚ್ಚಾಯಪ್ಪ ಸೇರಿದಂತೆ ಪತ್ರಕತ೯ರ ಸಂಘ ಹಾಗೂ ಪ್ರಸ್ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು. ಸಂತಾಪ ಗುಡಿಹಳ್ಳಿರವರ ನಿಧನಕ್ಕೆ ಪ್ರಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕಾಯ೯ದಶಿ೯ ನಾಗರಾಜ್ ನೇರಿಗೆ ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post