Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿರುವುದಕ್ಕೆ ಬಿಜೆಪಿ ಅಭ್ಯರ್ಥಿ ಸೋಮಣ್ಣ ಹಾಗೂ ಸಂಸದ ಪ್ರತಾಪ ಸಿಂಹ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, Shivrajkumar ಸೋಮಣ್ಣ ನಮಗೆ ಒಳ್ಳೆಯ ಆಪ್ತರು. ಪ್ರತಾಪ್ ಸಿಂಹ ಕೂಡ ನನಗೆ ಸ್ನೇಹಿತರು. ಅವರ ಬಗ್ಗೆ ಒಳ್ಳೆಯ ಗೌರವ ಇದೆ. ನನ್ನ ಬಗ್ಗೆ ಅವರೇನು ಹೇಳಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮಣ್ಣ ಅಲ್ಲಿ ಸ್ಪರ್ಧೆ ಮಾಡಿದ್ದಾರೆ ಅಂತಾ ನಿಜಕ್ಕೂ ನನಗೆ ಗೊತ್ತಿರಲಿಲ್ಲ. ಅಷ್ಟಕ್ಕೂ ನಾನೇನು ಚಿಕ್ಕ ಹುಡುಗನಾ? ನನಗೆ ಕೂಡ 61 ವರ್ಷ ಆಗಿದೆ. ನನಗೆ ಯಾರು ಎನಿಮಿ ಇಲ್ಲ. ನನಗೆ ಎಲ್ಲರೂ ಸ್ನೇಹಿತರೆ. ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದವರು ಯಾರು ಪ್ರಚಾರಕ್ಕೆ ಕರೆದಿರಲಿಲ್ಲ. ಕರೆದಿದ್ದರೆ ಅವರ ಪರ ಪ್ರಚಾರಕ್ಕೂ ಹೋಗುತ್ತಿದ್ದೆ ಎಂದರು.
ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ರಾಯಚೂರಿನಲ್ಲಿ ಒಬ್ಬರು ಸಾದಿಕ್ ಅಂತಾ ಇದ್ದಾರೆ. ಅಪ್ಪು ಜೀವಂತವಾಗಿ ಇದ್ದಾಗಲೂ ಕೆಲಸ ಮಾಡಿದ್ದರು. ಈಗಲೂ ಮಾಡುತ್ತಿದ್ದಾರೆ. ಆದರೆ ಅವರು ಯಾರು ಹೇಳಿಕೊಂಡು ಓಡಾಡಲ್ಲ. ನಾನು ಎಲ್ಲರಿಗೂ ಗೌರವ ಕೊಡುತ್ತೇನೆ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹೇಳಿಕೆಗೆ ತಿರುಗೇಟು ನೀಡಿದರು.
ಈ ಮೊದಲು ಸಿನಿಮಾದಲ್ಲಿ ಬಿಜಿ ಇದ್ದೆ. ಈಗ ಪ್ರಚಾರದಲ್ಲಿ ಬಿಜಿ ಆಗಿದ್ದೇನೆ. ಶಿವಣ್ಣಂಗೆ ಮಾತನಾಡಕ್ಕೆ ಆಗಲ್ಲ ಅಂತಾಲ್ಲ. ನನಗೂ ಮಾತನಾಡೋಕೆ ಬರುತ್ತದೆ. ಸುದೀಪ್ ಅವರು ಪ್ರಚಾರಕ್ಕೆ ಹೋಗುತ್ತಿದ್ದಾರೆ. ಹಾಗಂತ ನಾಳೆ ನಾನು, ಸುದೀಪ್ ಅವರನ್ನು ಮಾತನಾಡಿಸಲು ಆಗುವುದಿಲ್ಲ ಎಂದರೆ ಹೇಗೆ? ನಾನು ಸುದೀಪ್ ಕ್ಲೋಸ್ ಫ್ರೆಂಡ್ಸ್ ಇದ್ದೇವೆ ಎಂದರು.
ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಪ್ರಚಾರ ಚೆನ್ನಾಗಿ ಆಗಿದೆ. ಇಂದು ಮುಂಡುಗೋಡು, ಶಿರಸಿಯಲ್ಲಿ ಪ್ರಚಾರ ಮಾಡುತ್ತೇನೆ ಎಂದು ಪ್ರಶ್ನೆಯೊಂದಿಗೆ ಉತ್ತರಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಬೇಕು ಅಂತಾ ಮೊದಲಿನಿಂದ ಆಸೆ ಇತ್ತು. ಮೊನ್ನೆ ಅವರನ್ನು ಮೀಟ್ ಮಾಡಿದೆ. ರಾಹುಲ್ ಗಾಂಧಿ ಸ್ಮಾರ್ಟ್ ಆಗಿದ್ದಾರೆ. ನನಗೆ ರಾಹುಲ್ ಗಾಂಧಿ ಅವರು ಪಿಟ್ನೆಸ್ ಇಷ್ಟ ಆಯ್ತು. ಹೀಗಾಗಿ ಅವರ ಬಗ್ಗೆ ಇಂಪ್ರೆಸ್ ಆಗಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post