ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಾವಣಗೆರೆಯಲ್ಲಿ #Davanagere ನಡೆದ ವೀರಶೈವ ಲಿಂಗಾಯತ ಮಹಾಸಭಾದ ನಿರ್ಣಯಕ್ಕೆ ವೀರಶೈವ #Veerashaiva ಮುಖಂಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ #BSYediyurappa ಅವರು ಬದ್ಧರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಂಸದ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡ ಆಯನೂರು ಮಂಜುನಾಥ್ #AyanurManjunath ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ -ಲಿಂಗಾಯತ ಎಂಬುದು ಜಾತಿಯಲ್ಲ, ಅದೊಂದು ಪ್ರತ್ಯೇಕ ಧರ್ಮವೇ ಆಗಿದೆ. ಹಾಗಾಗಿ ಜಾತಿ ಜನಗಣತಿ ಸಂದರ್ಭದಲ್ಲಿ ಧರ್ಮ ಎಂಬ ಜಾಗದಲ್ಲಿ ವೀರಶೈವ -ಲಿಂಗಾಯತ ಎಂದು ನಮೂದಿಸಬೇಕು. ನಾವು ಹಿಂದೂಗಳಲ್ಲ, ನಮ್ಮದೇ ಪ್ರತ್ಯೇಕ ಧರ್ಮವಿದೆ ಎಂದು ಮಹಾಸಭಾದ ನಿರ್ಣಯವಾಗಿದೆ. ಈ ನಿರ್ಣಯವನ್ನು ಅನುಮೋದಿಸಿದವರೇ ಬಿ.ಎಸ್. ಯಡಿಯೂರಪ್ಪನವರು. ಇದಕ್ಕೆ ಸಾಕ್ಷಿಯಾಗಿ ಸಂಸದ ಬಿ.ವೈ. ರಾಘವೇಂದ್ರ, #BYRaghavendra ಶಾಸಕ ಬಿ.ವೈ. ವಿಜಯೇಂದ್ರ #BYVijayendra ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಇದ್ದರು ಎಂದರು.
ಹೀಗೆ ಕೈಗೊಂಡ ನಿರ್ಣಯಕ್ಕೆ ಬಿ.ಎಸ್. ಯಡಿಯೂರಪ್ಪನವರು ಒಪ್ಪಲೇ ಬೇಕಾಗುತ್ತದೆ. ಏಕೆಂದರೆ ಅನುಮೋದನೇ ಮಾಡಿದವರು ಅವರು. ಆಕಸ್ಮಾತ್ ಅದನ್ನು ಒಪ್ಪದಿದ್ದರೆ ಅದನ್ನಾದರೂ ಹೇಳಿ ತಮ್ಮ ಬದ್ಧತೆ ಪ್ರದರ್ಶಿಸಬೇಕು. ನಮ್ಮದು ಪ್ರತ್ಯೇಕ ಧರ್ಮ ಎಂದು ಹೇಳುವ ಅವರು ದ್ವಂದ್ವ ನಿಲುವನ್ನು ತಾಳಿದ್ದಾರೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎನ್ನುವುದು ಹಲವು ವರ್ಷಗಳಿಂದಲೂ ಇದೆ. ಇದನ್ನೇ ದಾವಣಗೆರೆಯಲ್ಲಿ ನಡೆದ ಎರಡು ದಿನದ ಮಹಾಸಭಾ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ನಿರ್ಣಯಕ್ಕೆ ಬಿ.ಎಸ್.ವೈ. ಜೈ ಎಂದಿದ್ದಾರೆ ಎಂದರು.
ಆದರೆ, ಯಡಿಯೂರಪ್ಪ ಅವರು ಬಿಜೆಪಿಯಲ್ಲಿದ್ದಾಗ #BJP ತಾವು ಹಿಂದೂ ವೀರಶೈವಕ್ಕೆ ಪ್ರತ್ಯೇಕ ಧರ್ಮ ಇಲ್ಲ ಎನ್ನುತ್ತಾರೆ. ಆದರೆ, ವೀರಶೈವ ಮುಖಂಡರ ಮತ್ತು ಮಠಾಧೀಶರ ನಡುವೆ ಇದ್ದಾಗ ನಾವು ಹಿಂದೂ ಅಲ್ಲ, ನಮಗೆ ನಮ್ಮದೇ ಆದ ಪ್ರತ್ಯೇಕ ಧರ್ಮವಿದೆ ಎನ್ನುತ್ತಾರೆ. ಇದು ಅವರ ದ್ವಂದ್ವ ಹೇಳಿಕೆಯಾಗಿದೆ. ರಾಜಕಾರಣಕ್ಕಾಗಿ, ಮತಕ್ಕಾಗಿ ಈ ರೀತಿ ಹೇಳುವುದು ಸರಿಯಲ್ಲ. ಆದ್ದರಿಂದ ಯಡಿಯೂರಪ್ಪ ಮತ್ತು ಇತರರು ದ್ವಂದ್ವ ನಿಲುವು ಬಿಟ್ಟು ತಮ್ಮ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
ಹಾಗೆಯೇ ಜನಗಣತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜನಗಣತಿಯ #CasteCensus ಪರ ಇಲ್ಲ. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ಜನಗಣತಿ ಬೇಕು ಎನ್ನುತ್ತಾರೆ. ಇಲ್ಲೂ ಕೂಡ ಅವರಲ್ಲಿ ದ್ವಂದ್ವ ಇದೆ. ಇವರು ತಾವು ದಿಕ್ಕು ತಪ್ಪುವುದರ ಜೊತೆಗೆ ವೀರಶೈವ ಲಿಂಗಾಯತ ಸಮಾಜವನ್ನೂ ದಿಕ್ಕುತಪ್ಪಿಸುತ್ತಿದ್ದಾರೆ. ಅವರು ದಿಕ್ಕು ತಪ್ಪಿದರೆ ಅಡ್ಡಿ ಇಲ್ಲ. ಆದರೆ, ಸಮಾಜವನ್ನು ದಿಕ್ಕು ತಪ್ಪಿಸಬಾರದು. ಹಾಗಾಗಿ ಅವರು ತಮ್ಮ ಸ್ಪಷ್ಟತೆ ತಿಳಿಸಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಪ್ರಮುಖರಾದ ಹಿರಣ್ಣಯ್ಯ, ಧೀರರಾಜ್ ಹೊನ್ನವಿಲೆ, ಪದ್ಮನಾಭ್, ಐಡಿಯಲ್ ಗೋಪಿ, ಶಿ.ಜು. ಪಾಶ, ಕೃಷ್ಣ, ಸೈಯದ್ ವಾಹಿದ್ ಅಡ್ಡು, ಲಕ್ಷ್ಮಣಪ್ಪ, ಸಂತೋಷ್ ಆಯನೂರು ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post