ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ನಗರದ ದುರ್ಗಿಗುಡಿಯ ಶ್ರೀರಾಘವೇಂದ್ರ ಸ್ವಾಮಿ ಗಳ ಸನ್ನಿಧಿಯಲ್ಲಿ ದಾಸ ಶ್ರೇಷ್ಠ ಶ್ರೀ ಜಗನ್ನಾಥ ದಾಸರ ಆರಾಧನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಜತರಥೋತ್ಸವದೊಂದಿಗೆ ಸರಳ ಸಂಪ್ರದಾಯದಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳ ಈ ಕಾರ್ಯಕ್ರಮದ ಮುಂದಾಳತ್ವವನ್ನು ಶ್ರೀ ಕ್ರೃಷ್ಣ ಭಜನಾ ಮಂಡಳಿಯ ಸುಧಾಬಾಯಿ ಹಾಗು ಭೀಮಾಚಾರ್ ದಂಪತಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಜಗನ್ನಾಥ ದಾಸವರೇಣ್ಯರ ಕುರಿತು ಭೀಮಾಚಾರ್ ಉಪನ್ಯಾಸ ನೀಡಿದರು. ಎ.ಆರ್. ವಿಠ್ಠಲ ಮೂರ್ತಿ ಆಚಾರ್ಯ ಅವರ ಪೌರೋಹಿತ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸೇವಾಕರ್ತರಾಗಿ ಉಪನ್ಯಾಸ ನೀಡಿದ ಭೀಮಾಚಾರ್ ರವರನ್ನು ವಿಠ್ಠಮೂರ್ತಿಯವರು ಆತ್ಮೀಯವಾಗಿ ಅಭಿನಂದಿಸಿದರು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post