ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೂಸು ಜನಿಸದೆ ನಾಮಕರಣ ಮಾಡಲು ಹೊರಟಂತಿದೆ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ Siddaramaiah, D K Shivakumar ಅವರ ವರ್ತನೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಕಟಕಿಯಾಡಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ. ಆಗಲೇ ಮುಖ್ಯಮಂತ್ರಿ ಖುರ್ಚಿ ಏರಲು ನಾಮುಂದು, ತಾಮುಂದು ಎನ್ನುತ್ತಾ ಜಾತಿ ರಾಜಕಾರಣ ಮಾಡಲು ಹೊರಟಿದ್ದಾರೆ. ಒಂದು ರಾಜ್ಯಕ್ಕೆ ಎರಡು ಮುಖ್ಯಮಂತ್ರಿಗಳು ಹೇಗೆ ಸಾಧ್ಯ. ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಹಾಗೂ ಅವರ ಪಕ್ಷದ ನಾಯಕರು ಇದನ್ನು ಖಂಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

Also read: ಮಳೆಯಿಂದ ಮನೆ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ: ಕೆ.ಎಸ್. ಈಶ್ವರಪ್ಪ ಭರವಸೆ
ಕುರುಬರು ಕನಕದಾಸ, ಸಂಗೊಳ್ಳಿರಾಯಣ್ಣನ ವಂಶಸ್ಥರು, ಒಕ್ಕಲಿಗರು ಕೇಂಪೇಗೌಡರ ವಂಶಸ್ಥರಾಗಿದ್ದು ಇವರು ಜಾತಿವಾದಿಗಳಾಗದೆ ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಮನೆಗೆ ಕಳಿಸುವುದು ಖಚಿತ ಹಾಗೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.










Discussion about this post