ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖ್ಯಮಂತ್ರಿಗಳು ಅತಿ ಹೆಚ್ಚಿನ ಸಂಖ್ಯೆಯ ಬಜೆಟ್ ಮಂಡಿಸಿದ ದಾಖಲೆ ಬರೆಯುವುದರ ಜೊತೆಗೆ ರಾಜ್ಯಕ್ಕೆ ಸಕಾರಾತ್ಮಕವಾಗಿ ಕೊಡುಗೆ ಕೊಡುವ ವಿಚಾರದಲ್ಲಿಯೂ 0 ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಹೇಳಿದ್ಧಾರೆ.
ಬಜೆಟ್ ಎಂಬುದು ಹಾಳೆಗಳ ಮೇಲಿನ ಲೆಕ್ಕಾಚಾರವಾಗಬಾರದು ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು #CM Siddaramaiah ಮಂಡಿಸುತ್ತಿರುವ ಬಜೆಟ್ ಕೇವಲ ಹಾಳೆಗಳ ಮೇಲಿನ ಲೆಕ್ಕಾಚಾರ ಎಂಬುದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ.

Also read: ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 430ನೇ ಜನ್ಮದಿನೋತ್ಸವ ‘ಲಕ್ಷ ಪುಷ್ಪಾರ್ಚನೆ’
ಕನಿಷ್ಠ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು,ಆರೋಗ್ಯ, ಶಿಕ್ಷಣ ಗ್ರಾಮೀಣಾಭಿವೃದ್ಧಿ ಇವಾವು ಬಜೆಟ್ ನಲ್ಲಿ ಕಾಣಸಿಗಲಿಲ್ಲ. ಉತ್ತರ ಕರ್ನಾಟಕ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಜೆಟ್ ಮೂಲಕ ಬಗೆಹರಿಯುವ ಸೂಚನೆ ನೀಡಲಿಲ್ಲ. ಈ ಬವಣೆ ಮತ್ತಷ್ಟು ಬೃಹದಕಾರವಾಗಿ ಬೆಳೆಯುವ ಲಕ್ಷಣಗಳಲ್ಲಿನ ಯಾವ ಅನುಮಾನವೂ ಬೇಡ. ಕಳೆದ ಕೆಲ ತಿಂಗಳುಗಳಲ್ಲಿ ಬಾಣಂತಿಯರ ಸಾವು ಒಳಗೊಂಡಂತೆ, ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿನ ಮಂಗನ ಕಾಯಿಲೆ ಹಾಗೂ ರಾಜ್ಯದಲ್ಲಿ ಆರೋಗ್ಯದ ವಿವಿಧ ಸಮಸ್ಯೆಗಳು ಕಾಡುತ್ತಿದ್ದರು ಮಾನ್ಯ ಮುಖ್ಯಮಂತ್ರಿಗಳು ಇದರ ಪರಿಹಾರದ ಸುಳಿವೇ ನೀಡಿಲ್ಲ.

- ಆಯುಷ್ ವಿಶ್ವವಿದ್ಯಾನಿಲಯದ ಪ್ರಸ್ತಾಪವಿಲ್ಲ.
- ತೋಟಗಾರಿಕೆ ಕಾಲೇಜು ಬಗ್ಗೆ ಕೂಡ ಯಾವುದೇ ವಿಚಾರ ಪ್ರಸ್ತಾಪವಾಗಿಲ್ಲ
- ನಿರ್ಮಲ ತುಂಗಾ ಅಭಿಯಾನ ಹಾಗೂ ಜನರ ಒಕ್ಕೊರಲು ಮತ್ತು ಪಾದಯಾತ್ರೆಯಿಂದ ಸರ್ಕಾರದ ಗಮನ ಸೆಳೆದರು. ಸಿದ್ದರಾಮಯ್ಯರ ನೇತೃತ್ವದ ರಾಜ್ಯ ಸರ್ಕಾರದಿಂದ ಯಾವುದೇ ಕಾಳಜಿ ಕಾಣಲಿಲ್ಲ.
- ಶಿವಮೊಗ್ಗ ಜಿಲ್ಲೆಯ ಟ್ರಕ್ ಟರ್ಮಿನಲ್ ಬಗ್ಗೆ ಕೂಡ ಎಲ್ಲಿಯೂ ಪ್ರಸ್ತಾಪವಾಗಲಿಲ್ಲ.
- ಪಶು ವೈದ್ಯಕೀಯ ವಿವಿ ಬಗ್ಗೆಯ ವಿಚಾರ ಕೂಡ ಪ್ರಸ್ತಾಪವಾಗಲಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post