ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದುಬೈನ ಅಡ್ಮಿರಲ್ ಪ್ಲಾಜಾ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ಇಂಟರ್ ನ್ಯಾಷನಲ್ ಯೂತ್ ಯೋಗ ಫೆಡರೇಷನ್, ಸುಬ್ರ ಸ್ಕೂಲ್ ಆಫ್ ಯೋಗ ಸಂಯುಕ್ತವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಯೋಗ ಚಿಕಿತ್ಸಕಿ ರಾಜಶ್ರೀ ರಘು ಅವರ ಮಕ್ಕಳಾದ ರಾಘ್ನಿ ಆರ್. ಜಮದಗ್ನಿ, ವಿವಾನ್ ಆರ್. ಜಮದಗ್ನಿ ಅವರು ಬೆಳ್ಳಿ ಪದಕವನ್ನು ಗಳಿಸಿದ್ದಾರೆ.
ಸ್ಪರ್ಧೆಯಲ್ಲಿ ವಿವಿಧ ದೇಶಗಳ 300 ಕಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು. ಸರ್ಜಿ ಆಸ್ಪತ್ರೆಗಳ ಸಮೂಹದ ಯೋಗ ಚಿಕಿತ್ಸಕಿ ರಾಜಶ್ರೀ ರಘು ಅವರು ಈ ಸ್ಪರ್ಧೆಯಲ್ಲಿ ತರಬೇತುದಾರಾಗಿ ಭಾಗವಹಿಸಿದ್ದರು. ವಿಜೇತರಿಗೆ ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಧನಂಜಯ ಸರ್ಜಿ ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.











Discussion about this post