ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಕೋಟೆ ರಸ್ತೆಯ ಕೋಟೆ ಗೆಳೆಯರ ಬಳಗದಿಂದ 66ನೇ ಕನ್ನಡ ರಾಜ್ಯೋತ್ಸವವನ್ನು ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆ ಹಿನ್ನಲೆ ಮೌನಾಚರಿಸಿ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿಗಳು, ಸಾಧಕರು, ಸಮಾಜ ಸೇವಕರು ಹಾಗೂ ಪತ್ರಕರ್ತರಿಗೆ ಗೌರವಿಸಲಾಯಿತು. ನಿವೃತ್ತ ಪ್ರಾಂಶುಪಾಲೆ ನಾಗಮಣಿ ಅವರು ರಾಜ್ಯೋತ್ಸವ ಕುರಿತು ಮಾತನಾಡಿದರು.


ಗೆಳೆಯರ ಬಳಗದ ರಂಜಿತ್, ಧನಂಜಯ್, ಅಕ್ಷಯ್, ಚಂದನ್, ಬಲರಾಮ್, ಸತೀಶ್ ಜಟ್ಟಿ ಹಾಗೂ ಶರತ್ ಇನ್ನಿತರರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















