ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅತಿ ಸಣ್ಣ ವಾಹನದ (RTO ರಿಜಿಸ್ಟ್ರೇಷನ್ ಇಲ್ಲದ ಎಲೆಕ್ಟ್ರಿಕ್ ವಾಹನದ) ವೇಗದ ಮಿತಿಯನ್ನು 25 ಕಿ.ಮೀ ನಿಂದ 40 ಕಿ.ಮೀ ಗೆ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಅನುಮತಿ ನೀಡುವಂತೆ ವಿನಂತಿಸಿ, ಕರ್ನಾಟಕದಲ್ಲಿ ಖಾಸಗಿಯವರು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಇರುವ ಕಾನೂನು ತೊಡಕುಗಳನ್ನು ಸರಳೀಕರಣಗೊಳಿಸಲು ಕೆಎಸ್ಎಸ್ಐಸಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ S Dattatri ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ Central Minister Nitin Gadkari ಅವರಿಗೆ ಮನವಿ ಸಲ್ಲಿಸಿದರು.
ನವದೆಹಲಿಯ ಅವರ ಸ್ವಗೃಹದಲ್ಲಿ “ಕರ್ನಾಟಕ ಎಲೆಕ್ಟ್ರಿಕಲ್ ವೆಹಿಕಲ್ ಮ್ಯಾನುಫ್ಯಾಕ್ಚರರ್ಸ್ ಅಂಡ್ ಡೀಲರ್ಸ್ ಅಸೋಸಿಯೇಷನ್” ನ ತಂಡದೊಂದಿಗೆ (ಎಲೆಕ್ಟ್ರಿಕಲ್ ವಾಹನಗಳ ಉತ್ಪಾದಕರ ದಂಡ) ಭೇಟಿ ಮಾಡಿ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿರುವಂತಹ ಅನೇಕ ಸಮಸ್ಯೆಗಳ ಬಗ್ಗೆ ಹಾಗೂ ಸರ್ಕಾರದ ವತಿಯಿಂದ ಇನ್ನಷ್ಟು ರಿಯಾಯಿತಿಗಳ ಬಗ್ಗೆ ಚರ್ಚಿಸಿದರು.
Also read: ಮರಗಿಡಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಶ್ರೀಪಾದ ಬಿಚ್ಚುಗತ್ತಿ
ಈ ಸಂದರ್ಭದಲ್ಲಿ ಕರ್ನಾಟಕ ಎಲೆಕ್ಟ್ರಿಕಲ್ ವೆಹಿಕಲ್ ಮ್ಯಾನುಫ್ಯಾಕ್ಚರರ್ಸ್ ಅಂಡ್ ಡೀಲರ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿಗಳು ಹಾಗೂ ನರೇಂದ್ರ ಮೋದಿ ವಿಚಾರ ಮಂಚ್ ನ ರಾಜ್ಯಾಧ್ಯಕ್ಷ ಕೆ.ಆರ್. ವೆಂಕಟೇಶ್, ಖ್ಯಾತ ಇ- ಅಶ್ವ ಆಟೋಮೋಟಿವ್ ಪ್ರೈ. ಲಿ. ನ ಮಾಲೀಕ ವಿಕಾಸ್ ಗುಪ್ತ, ಸುಭಾಷ್ ಆಟೋಮೋಟಿವ್ ಪ್ರೈ. ಲಿ. ನ ಮಾಲೀಕ ನಾಗೇಶ್, ರಾಜೀವ್ ತಿವಾರಿ, ದೇಶಮುಖ್, ರಾನಡೆ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post