ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರೀನ್ ವ್ಯೂವ್ ಕ್ಲಾರ್ಕ್ಸ್ ಇನ್ ಹೋಟೆಲ್‌ನಲ್ಲಿ ಫೆ.10ರಿಂದ 19ರ ವರೆಗೆ ಸ್ನೋ ವರ್ಲ್ಡ್ ಫುಡ್ ಫೆಸ್ಟಿವಲ್ (ಚಳಿಚಳಿಯಲ್ಲಿ ಬಿಸಿಬಿಸಿ ಊಟ) ಅನ್ನು ಆಯೋಜಿಸಲಾಗಿದೆ ಎಂದು ಜನರಲ್ ಮ್ಯಾನೇಜರ್ ಆಶಿಶ್ ಧವನ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಗ್ರೀನ್ ವ್ಯೂವ್ ಹೋಟೆಲ್ ಸಂಸ್ಥೆಯಿಂದ ವಿನೂತನ ಸ್ವಾದಿಷ್ಟವಾದ ಅಡಿಗೆ ಮತ್ತು ತಿಂಡಿ ತಿನಿಸುಗಳ ಹಬ್ಬವನ್ನು ಈ ಹೋಟೆಲ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಆಚರಿಸಲಾಗುತ್ತಿದೆ. ನುರಿತ ಡೆಲ್ಲಿ ಚೆಫ್ ತಂಡದವರು ಈ ಆಹಾರವನ್ನು ಸಿದ್ಧಪಡಿಸುತ್ತಾರೆ. ಬಫೆ ಲಂಚ್ ಮಧ್ಯಾಹ್ನ 12:30ರಿಂದ 4 ಗಂಟೆಯವರೆಗೆ, ಬಫೆ ಡಿನ್ನರ್ ಸಂಜೆ 7:30ರಿಂದ ರಾತ್ರಿ 11ರವರೆಗೆ ನಡೆಯಲಿದೆ. ಆಸಕ್ತರು ಇದರ ಸವಿರುಚಿಯನ್ನು ಸವಿಯಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್ ಐಯಾನ್, ಸತೀಶ್ ಗೌಡ ಉಪಸ್ಥಿತರಿದ್ದರು.
Also read: ಮಕ್ಕಳಿಗೆ ರಕ್ತದಗುಂಪಿನ ಬಗ್ಗೆ ಅರಿವು ಅಗತ್ಯ: ಮುಖ್ಯ ಶಿಕ್ಷಕ ಮಂಜಪ್ಪ ಅಭಿಪ್ರಾಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post