ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಜನಗಣತಿ ಸಮೀಕ್ಷೆ ವರದಿಯನ್ನು ಅಂಗೀಕರಿಸಿದ್ದು, ಕೂಡಲೇ ಅದನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ರಾಮಣ್ಣ, ಆಗ್ರಹಿಸಿದ್ದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2018ರಲ್ಲಿಯೇ ಸಾಮಾಜಿಕ ಶೈಕ್ಷಣಿಕ ಜನಗಣತಿ ಸಮೀಕ್ಷೆ ಮುಗಿದಿತ್ತು. ಅನಂತರದಲ್ಲಿ ಯಾವ ಸರ್ಕಾರಗಳು ಕೂಡ ಅದನ್ನು ಅಂಗೀಕರಿಸಲಿಲ್ಲ. ಅಂದಿನಿಂದಲೇ ನಮ್ಮ ಒಕ್ಕೂಟ ಹೋರಾಟ ನಡೆಸುತ್ತ ಬಂದಿತ್ತು. ರಾಜ್ಯ ಸರ್ಕಾರ ಇತ್ತೀಚಿಗೆ ಈ ವರದಿಯನ್ನು ಸ್ವೀಕಾರ ಮಾಡಿದೆ. ಆದರೆ, ಅದನ್ನು ವಿಳಂಬ ಮಾಡದೇ ಕೂಡಲೇ ಸರ್ಕಾರದ ವತಿಯಿಂದಲೂ ಅಧ್ಯಯನ ಮಾಡಬೇಕು. ಮತ್ತು ಅದನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಅಧ್ಯಯನ ನಡೆಸಲು ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

Also read: ಏಳನೇ ವೇತನ ಆಯೋಗ ಜಾರಿ ವಿಚಾರ | ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಆಗ್ರಹವೇನು?
ಒಕ್ಕೂಟದ ಜಿಲ್ಲಾಧ್ಯಕ್ಷ ವಿ.ರಾಜು ಮಾತನಾಡಿ, ಶಿವಮೊಗ್ಗ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ದಿ.ದೇವರಾಜ್ ಅರಸ್ ಭವನ ನಿರ್ಮಾಣಗೊಂಡಿರುತ್ತದೆ. ಈ ಕಾಮಗಾರಿ ಪೂರ್ಣಗೊಳಿಸಲು 3 ಕೋಟಿ ಅನುದಾನಗಳ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟದಿಂದ ಆಯ್ಕೆಯಾದ ಸಚಿವರನ್ನು ಮತ್ತು ಲೋಕಸಭಾ ಸದಸ್ಯರನ್ನು ಮತ್ತು ಕರ್ನಾಟಕದ ವಿಧಾನಸಭಾ ಸದಸ್ಯರನ್ನು ಒಕ್ಕೂಟ ಅಭಿನಂದಿಸುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಅಶೋಕ್‍ಕುಮಾರ್, ಪ್ರಮುಖರಾದ ಪಿ.ಆರ್.ಗಿರಿಯಪ್ಪ, ರಾಜೇಶ್, ಲೋಕೇಶ್, ಚಂದ್ರಶೇಖರ್, ಶಾರದಮ್ಮ, ನಾಗರತ್ನ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post