ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ವಿದ್ಯಾಭ್ಯಾಸ ಮಟ್ಟವನ್ನು ತಾರ್ಕಿಕವಾಗಿ ಹಾಗೂ ಪ್ರಾಯೋಗಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗುವ ಸಮಾಜಮುಖಿ ಕಾರ್ಯಕ್ರಮವು ತನ್ನದೇ ಆದ ಪ್ರಸ್ತುತತೆಯನ್ನು ಪಡೆದಿದೆ ಎಂದು ವಿರುಪಿನಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರವಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ PESIT ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಿಷಿನ್ ಲರ್ನಿಂಗ್ ವಿಭಾಗದ ವತಿಯಿಂದ “ಐ ಸಪ್ಪೋರ್ಟ್, ಐ ಕೇರ್ ಮತ್ತು ಐ ಯಾಮ್ ರೆಸ್ಪಾನ್ಸಿಬಲ್” ಎಂಬ ವಿನೂತನ ಸಮಾಜಮುಖಿ ಕಾರ್ಯಕ್ರಮದ ಅಡಿಯಲ್ಲಿ ವಿರುಪಿನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಪುಸ್ತಕಗಳು, ಪೆನ್ನುಗಳು, ನೀರಿನ ಬಾಟಲ್ ಗಳು ಮತ್ತು ಹಲವಾರು ಬಹುಪಯೋಗಿ ದಿನಬಳಕೆ ವಸ್ತುಗಳ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಮನಸ್ಸಿನಲ್ಲಿ ಅಚ್ಚಳಿಯದ ಕೃತಜ್ಞತಾ ಭಾವವನ್ನು ಸೃಷ್ಟಿಸುತ್ತದೆ ಪ್ರಾಸ್ತಾವಿಕವಾಗಿ ನುಡಿದರು.
Also read: ಯುವನಿಧಿ ಹೆಸರಿನಲ್ಲಿ ರಾಜ್ಯ ಸರ್ಕಾರದಿಂದ ಯುವಜನತೆಯ ಕಣ್ಣಿಗೆ ಮಣ್ಣೆರೆಚ್ಚುವ ಕೆಲಸ: ಸಂಸದ ರಾಘವೇಂದ್ರ ಆರೋಪ
ಪಿಇಎಸ್ಐಟಿಎಂನ ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಸಂದೀಪ್ ತೇಲ್ಕರ್ ಮಾತನಾಡಿ, ಸಾಮಾಜಿಕ ಬದ್ಧತೆಯನ್ನು ಪಸರಿಸುವಲ್ಲಿ ಪಿಇಎಸ್ಐಟಿಎಂ ವಿದ್ಯಾಸಂಸ್ಥೆಯು ಅನವರತ ಶ್ರಮಿಸುತ್ತಲೇ ಇರುತ್ತದೆ ಎಂದು ನುಡಿದರು.
ವಿಭಾಗದ ಎನ್ ಎಸ್ ಎಸ್ ವಿದ್ಯಾರ್ಥಿ ಸಂಚಾಲಕ ಶಂಕರ್ ಇಂದೆ ಮಾತನಾಡಿ, ಪುಸ್ತಕ ವಿತರಣಾ ಕಾರ್ಯಕ್ರಮದ ಸದುದ್ದೇಶವನ್ನು ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ವಿವಿಧ ನಮೂನೆಯ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಪಕ್ಷಿನೋಟ ವಿವರಣೆಯನ್ನು ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post