ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಸೋಮಿನಕೊಪ್ಪ ಫ್ಲೈಓವರ್ ಅಡಿ ಹಲ್ಲೆ ನಡೆಸಲಾಗಿದೆ. ಅವರ ಕಾರಿನ ಗಾಜನ್ನು ಒಡೆಯಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯ ಇಂಜಿನಿಯರ್ ಲೋಕೇಶ್ ಎಂಬುವವರ ಮೇಲೆ ಹಲ್ಲೆಯಾಗಿದೆ.
ನಗರದ ಕ್ಲಬ್ ಒಂದರಲ್ಲಿ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿ ಲೋಕೇಶ್ ಮತ್ತು ಅವರ ಸ್ನೇಹಿತ ಕಾರಿನಲ್ಲಿ ವಿನೋಬನಗರದ ಮನೆಗೆ ತೆರಳುತ್ತಿದ್ದರು. ಗೋಪಿ ಸರ್ಕಲ್‌ನಲ್ಲಿ ವಿಜಯೋತ್ಸವ ನಡೆಯುತ್ತಿತ್ತು. ರಸ್ತೆಯಲ್ಲಿ ಯುವಕರ ಇದ್ದಿದ್ದರಿಂದ ಅಲ್ಲಿಂದ ಹಾದು ಹೋಗುವಾಗ ಲೋಕೇಶ್ ಅವರು ಚಲಿಸುತ್ತಿದ್ದ ಕಾರು ಹಾರನ್ ಹೊಡೆದಿದ್ದರು. ಆಗ ಕೆಲವು ಯುವಕರು ಲೋಕೇಶ್ ಮತ್ತು ಅವರ ಸ್ನೇಹಿತನ ಜೊತೆಗೆ ಜಗಳವಾಡಿದ್ದರು ಎಂದು ಆರೋಪಿಸಲಾಗಿದೆ.
ಲೋಕೇಶ್ ಅವರ ಕಾರು ಸೋಮಿನಕೊಪ್ಪದ ಫ್ಲೈಓವರ್ ಕೆಳಗೆ ತೆರಳುವಾಗ ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿ ಬಂದ ಯುವಕರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿದ್ದ ಲೋಕೇಶ್ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















