ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಣ್ಣನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ರೈತರು ಉತ್ತಮವಾದ ಬೆಳೆಯನ್ನು ಬೆಳೆಯಬಹುದು ಎಂದು ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನ #World Environment Day ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ “ಭೂಮಿಯನ್ನು ಪುನ: ಸ್ಥಾಪಿಸಿ ಮರುಭೂಮಿ ಕರಣ ತಡೆ ಮತ್ತು ಬರ ಎದುರಿಸುವುದು” ಎಂಬ ವಿಷಯದ ಅಡಿಯಲ್ಲಿ ಅವರು ಮಾತನಾಡಿ, ನಮ್ಮ ದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಬೇಕೆಂದು ಅತ್ಯದ್ಭುತವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಇದರ ಜೊತೆಗೆ ನಮ್ಮ ಭೂಮಿಯ ಮಣ್ಣು ರಾಸಾಯನಿಕ ಗೊಬ್ಬರಗಳಿಂದ, ವಿಷ ಅನಿಲಗಳಿಂದ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪ್ರಸ್ತುತ ಶೇಕಡ ಎಷ್ಟು ಭಾಗ ಮಾಲಿನ್ಯವಾಗಿದೆ, ಶೇಕಡ ಮಣ್ಣಿನ ಫಲವತ್ತತೆಯನ್ನು ಎಷ್ಟು ಭಾಗ ಹೆಚ್ಚಿಸಬೇಕು ಹಾಗೂ ಫಲವತ್ತತೆಯನ್ನು ಹೆಚ್ಚಿಸಲು ನಾವು ಮಾಡಬೇಕಾದ ಕರ್ತವ್ಯಗಳು ಯಾವುವು? ಎಂದು ತಿಳಿಸಿದರು.
Also read: ಚಿಕ್ಕಬಳ್ಳಾಪುರ | ಕಾಲುವೆಗೆ ಹಾರಿಬಿದ್ದ ಕಾರು | ಮರದಲ್ಲಿ ನೇತಾಡಿದ ಮೃತದೇಹ
ಕಾರ್ಯಕ್ರಮದಲ್ಲಿ ಹೌಸ್ ವಿದ್ಯಾರ್ಥಿಗಳಿಗೆ ಸ್ಕ್ಯಾವೆಂಜರ್ ಹಂಟ್ (ಪರಿಸರ ಜಾಗೃತಿ ) ಚಟುವಟಿಕೆಯ ಮೂಲಕ ಪರಿಸರ ಪ್ರೇಮ ಮೂಡಿಸಲಾಯಿತು. ಟಾಡ್ಲೆರ್ಸ್ ಮಕ್ಕಳು ಪ್ರತಿ ತರಗತಿಗೆ ಒಂದು ಗಿಡ ನೆಟ್ಟು ಅದನ್ನು ಪೋಷಿಸುವ ಪ್ರಮಾಣವನ್ನು ಮಾಡಿದರು. ಸ್ಕೌಟ್ ಅಂಡ್ ಗೈಡ್ ವಿದ್ಯಾರ್ಥಿಗಳಿಗೆ ಸರ್ಕಾರಿ ಆರೋಗ್ಯ ಕೇಂದ್ರ ಕರೆದುಕೊಂಡುಹೋಗಿ ವಿದ್ಯಾರ್ಥಿಗಳಿಂದ ಸಸಿಗಳನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಿಒಒ ಸುಮಂತ್, ಸೌಲಭ್ಯ ವ್ಯವಸ್ಥಾಪಕ ವಿಜಯಕುಮಾರ್, ಶಿಕ್ಷಕರು, ಶಿಕ್ಷಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post