No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Friday, May 1, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

ಸೊರಬ | ಸೋರುತ್ತಿವೆ ಕೊಠಡಿಗಳು, ಜೀವಭಯದಲ್ಲೇ ಪಾಠ ಕೇಳುವ ಅನಿವಾರ್ಯತೆಯಲ್ಲಿ ಮಕ್ಕಳು

ಶಿಕ್ಷಣ ಸಚಿವರ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳ ಗೋಳು ದೇವರಿಗೇ ಪ್ರೀತಿ | ಪರಿಹಾರ ದೊರೆಯುವುದೇ?

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 20, 2024
in ಸೊರಬ
0
ಸೊರಬ | ಸೋರುತ್ತಿವೆ ಕೊಠಡಿಗಳು, ಜೀವಭಯದಲ್ಲೇ ಪಾಠ ಕೇಳುವ ಅನಿವಾರ್ಯತೆಯಲ್ಲಿ ಮಕ್ಕಳು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸೊರಬ  |

ಹೆಸರಿಗಷ್ಟೇ ಶಿಕ್ಷಣ ಸಚಿವರ ಕ್ಷೇತ್ರ. ಆದರೆ, ಇಲ್ಲಿನ ಈ ಒಂದು ಶಾಲೆಯಲ್ಲಿ ಜೀವ ಒತ್ತಯಿಟ್ಟು ಪಾಠ ಕೇಳಬೇಕಾದ ಅನಿವಾರ್ಯತೆಯಲ್ಲಿರುವ ವಿದ್ಯಾರ್ಥಿಗಳ ಗೋಳು ಮಾತ್ರ ದೇವರಿಗೆ ಪ್ರೀತಿ…

ಹೌದು… ಇದು ಸೊರಬ #Soraba ತಾಲೂಕಿನ ಶಂಕ್ರಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ ಹಾಗೂ ಮಕ್ಕಳು ಮಳೆಗಾಲದಲ್ಲಿ ಎದುರಿಸುತ್ತಿರುವ ಸಮಸ್ಯೆಯಿದು. ಮಳೆಗಾಲವನ್ನು #Winter ಆನಂದಿಸಬೇಕಾದ ಈ ಶಾಲೆಯ ಮಕ್ಕಳಿಗೆ ಈ ಕಾಲವೇ ಸಂಕಷ್ಟ ತಂದೊಡ್ಡಿದೆ. ಇದಕ್ಕೆ ಕಾರಣ ಶಾಲೆಯ ಕೊಠಡಿಗಳು ಸೋರುತ್ತಿರುವುದು.

ಜಿಲ್ಲೆ ಸೇರಿದಂತೆ ತಾಲೂಕಿನಲ್ಲೂ ನಿರಂತರವಾಗಿ ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಕೊಠಡಿಗಳು ಸೋರುತ್ತಿವೆ. ತಾಲೂಕಿನ ಶಂಕ್ರಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 35ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದರೆ ವಿಪರೀತವಾಗಿ ಮಳೆಗೆ ಮಕ್ಕಳು ಶಾಲೆಯಲ್ಲಿ ಪರದಾಡುವ ಸ್ಥಿತಿ ಇಲ್ಲಿ ಬಾಧಿಸುತ್ತಿದೆ.

Also read: ಮನೆ ಊಟಕ್ಕಾಗಿ ದರ್ಶನ್ ನ್ಯಾಯಾಲಯದ ಮೊರೆ: ಹೈಕೋರ್ಟ್ ಆದೇಶವೇನು?
ಒಂದಡೆ ಕೊಠಡಿಗಳು ಕಳಪೆ ಕಾಮಗಾರಿಯಿಂದ ಸೋರಿದರೆ, ಇನ್ನೊಂದಡೆ ಮಳೆ ನೀರು ಕೋಣೆಯೊಳಗೆ ಬೀಳುವುದರಿಂದ ಮಕ್ಕಳು ಮಳೆ ನೀರಲ್ಲಿಯೇ ಪಾಠ ಕೇಳುತ್ತಿದ್ದಾರೆ.

ಯಾವಾಗ ಕಟ್ಟಡ ನಿರ್ಮಾಣವಾಗಿತ್ತು?
ಎಸ್’ಎಸ್’ಎ ಯೋಜನೆಯಡಿಯಲ್ಲಿ #SSAScheme 2019-20ರಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಸ್’ಡಿಎಂಸಿ #SDMC ಖಾತೆಯ ಮೂಲಕ ಜಂಟಿಯಾಗಿ ಈ ಶಾಲಾ ಕೊಠಡಿಯ ಕಟ್ಟಡ ನಿರ್ಮಾಣ ಆರಂಭಗೊಂಡು, 2011-12ರಲ್ಲಿ ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡಿತ್ತು.

ಈ ಕೊಠಡಿಯ ಕಟ್ಟಡ ನಿರ್ಮಾಣಕ್ಕೆ 3.80 ಲಕ್ಷ ರೂ. ವೆಚ್ಚ ಮಾಡಲಾಗಿತ್ತು. ಆದರೆ, 2012-13ರಿಂದಲೇ ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ಸಿಡಿಯಲು ಆರಂಭವಾಗಿತ್ತು. ಅದು ಮಕ್ಕಳಿಗೆ ಮಳೆಗಾಲದಲ್ಲಿ ಸಮಸ್ಯೆಯಾಗಿ ಪರಿಣಮಿಸಿತು.

ಜೀವ ಭಯದಲ್ಲಿಯೇ ಪಾಠ ಕೇಳುವ ಸ್ಥಿತಿ ಎದುರಾಗಿದೆ. ಕೊಠಡಿ ಸೋರಿ ವಿದ್ಯುತ್ ಗ್ರೌಂಡಿಂಗ್ ಆಗಿ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಹೊಸ ಕೊಠಡಿ ನಿರ್ಮಾಣ ಮಾಡಿಕೊಡಬೇಕು.
-ರಶ್ಮಿ, ವಿದ್ಯಾರ್ಥಿನಿ

ಇನ್ನೊಂದೆಡೆ, 2022-23ರಲ್ಲಿ ಪಂಚಾಯ್ತಿ ಕಾರ್ಯಾಲಯ ಶಕುನವಳ್ಳಿ ವತಿಯಿಂದ ಸುಮಾರು 70 ಮೀಟರ್’ಗಳಷ್ಟು ಕಾಂಪೌಂಡ್ ಗೋಡೆಯನ್ನು ಅಂದಾಜು 3 ಲಕ್ಷ ರೂ.ಗಳಲ್ಲಿ ನಿರ್ಮಾಣ ಎಂದು ಫಲಕ ಮಾತ್ರ ಇದೆ. ಆದರೆ, ಕಾಂಪೌಂಡ್ ಗೋಡೆ ಮಾತ್ರ ಕಾಣೆಯಾಗಿದೆ. ಕಾಂಪೌಂಡ್ ನಿರ್ಮಾಣದ ಕೆಲಸ ಉದ್ಯೋಗ ಖಾತ್ರಿ ಯೋಜನೆಯಡಿ 2 ವರ್ಷಗಳ ಹಿಂದೆ ನೀಡಿದ್ದರೂ ಇನ್ನು ನಿರ್ಮಾಣಗೊಂಡಿಲ್ಲ ಎನ್ನುವುದೂ ಸಹ ಆರೋಪವಾಗಿದೆ.

ಈ ಕಟ್ಟಡದ ದುಸ್ಥಿತಿಯ ಕುರಿತಾಗಿ ಕಳೆದ 3 ವರ್ಷಗಳಿಂದ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿ, ಹೊಸ ಕೊಠಡಿಗಳ ನಿರ್ಮಾಣ ಹಾಗೂ ಸೋರುತ್ತಿರುವ ಕೊಠಡಿಗಳ ದುರಸ್ಥಿಗೆ ಕ್ರಮ ಕೈಗೊಂಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಇನ್ನು, ಶೌಚಾಲಯ ಕೊಠಡಿಗಳ ಗೋಡೆ ಬಿರುಕು ಬಿಟ್ಟಿದ್ದು ಯಾವಾಗ ಕುಸಿದು ಬೀಳುತ್ತೋ ಅನ್ನೋ ಆತಂಕ ಮಕ್ಕಳನ್ನು ಕಾಡುತ್ತಿದೆ. ಕೊಠಡಿಯ ಗೋಡೆ ಮೇಲೆ ನೀರಿಳಿದು ವಿದ್ಯುತ್ ಮೀಟರ್ ಸುತ್ತ ಆವರಿಸಿದೆ. ಶಾಲಾ ಬಾಗಿಲು ಕಬ್ಬಿಣದಾಗಿದ್ದು, ಮಕ್ಕಳಿಗೆ ಕರೆಂಟ್ ತಗುಲುವ ಸಾಧ್ಯತೆ ಹೆಚ್ಚಿದೆ.ಕಳಪೆ ಕಾಮಗಾರಿ, ಭ್ರಷ್ಟಾಚಾರ?
ಇನ್ನು ಕೆಲವು ವರ್ಷಗಳ ಹಿಂದೆ ನಿರ್ಮಾಣವಾದ ಈ ಶಾಲಾ ಕೊಠಡಿಗಳು ಸೋರುತ್ತಿವೆ. ಶೌಚಾಲಯ ಬಿರುಕುಬಿಟ್ಟು ಬೀಳುವ ಹಂತಕ್ಕೆ ತಲುಪಿವೆ. ಗುತ್ತಿಗೆ ಪಡೆದವರು ಮತ್ತು ಅಧಿಕಾರಿಗಳು ಶಾಮೀಲಾಗಿ, ಕಳಪೆ ಕೊಠಡಿಗಳ ಕಾಮಗಾರಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಕೆಲವೇ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಕೊಠಡಿಗಳು ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಗುತ್ತದೆ.
ಇನ್ನು ಮಕ್ಕಳು ಜೀವ ಭಯದಲ್ಲಿಯೇ ಪಾಠ ಕೇಳುತ್ತಿದ್ದಾರೆ. ಕೊಠಡಿ ಸೋರಿ ವಿದ್ಯುತ್ ಗ್ರೌಂಡಿಂಗ್ ಆಗಿ ದೊಡ್ಡ ಅನಾಹುತಕ್ಕೆ ಎಡೆಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದರೊಂದಿಗೆ ಮಳೆಯಿಂದ ರಕ್ಷಿಸಿಕೊಳ್ಳಲು ತಾತ್ಕಾಲಿಕವಾಗಿ ಟಾಡ್ಪಾಲ್ ಆದರೂ ಒದಗಿಸಿ ಎಂದು ಬೇಡಿಕೆ ಇಟ್ಟರೂ ಅದಕ್ಕೂ ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನುವುದು ಆರೋಪವಾಗಿದೆ.

ಇಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿದರೆ ದೊಡ್ಡ ಭ್ರಷ್ಟಾಚಾರವೇ ಹೊರಬರುತ್ತೆ ಎಂದು ಎಸ್’ಡಿಎಂಸಿ ಸದಸ್ಯರು ಹೇಳುತ್ತಾರೆ.

ಕೊಠಡಿಗಳ ದುರಸ್ಥಿ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕಿದೆ. ಜೊತೆಗೆ ಕಳಪೆ ಗುಣಮಟ್ಟದ ಕೊಠಡಿಗಳ ನಿರ್ಮಾಣ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿದರೆ ದೊಡ್ಡ ಭ್ರಷ್ಟಾಚಾರವೇ ಹೊರಬರುತ್ತದೆ.
-ಶ್ರೀಕಾಂತ್, ಎಸ್’ಡಿಎಂಸಿ ಸದಸ್ಯರು

Kalahamsa Infotech private limitedಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಈ ಗೋಳು
ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸೌಲಭ್ಯಗಳ ಕೊರತೆಯಿಂದ ಅನೇಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಿರುವಾಗ ಶಿಕ್ಷಣ ಸಚಿವರು ಪ್ರತಿನಿಧಿಸುವ ಕ್ಷೇತ್ರದ ಒಂದು ಸರ್ಕಾರಿ ಶಾಲೆಯ ಸ್ಥಿತಿಯೇ ಹೀಗಾದರೆ ಹೇಗೆ?

ಹತ್ತಾರು ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ, ಮಕ್ಕಳ ಭವಿಷ್ಯವನ್ನು ರೂಪಿಸುವ ಸರ್ಕಾರಿ ಶಾಲೆಗಳ ದುರಸ್ಥಿ ಮತ್ತು ಹೊಸ ಕೊಠಡಿಗಳ ನಿರ್ಮಾಣ ಭಾಗ್ಯವನ್ನು ಕೂಡಾ ನೀಡಬೇಕಾಗಿದೆ. ಆ ಮೂಲಕ ಮಕ್ಕಳು ಭಯಮುಕ್ತ, ಆತಂಕಮುಕ್ತವಾಗಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣ ಮಾಡಬೇಕಿದೆ. ಇನ್ನಾದರೂ ಸರ್ಕಾರ ಈ ಕೊಠಡಿಗಳ ದುರಸ್ಥಿ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕಿದೆ. ಜೊತೆಗೆ ಕಳಪೆ ಗುಣಮಟ್ಟದ ಕೊಠಡಿಗಳ ನಿರ್ಮಾಣ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಶಿಕ್ಷಣ ಸಚಿವರು ಈ ಬಗ್ಗೆ ಶೀಘ್ರ ಗಮನ ಹರಿಸಿಯಾರೆ?

(ವರದಿ: ಮಧುರಾಮ್, ಸೊರಬ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: Government SchoolGovt Primary SchoolKannada News WebsiteLatest News Kannadaschool roomSDMCShimogaShivamoggaShivamogga NewsSorabaSSC Schemeಎಸ್'ಎಸ್'ಎ ಯೋಜನೆಎಸ್'ಡಿಎಂಸಿಭಾರಿ ಮಳೆಮಳೆಗಾಲಶಾಲಾ ಕೊಠಡಿಶೌಚಾಲಯಸರ್ಕಾರಿ ಪ್ರಾಥಮಿಕ ಶಾಲೆಸರ್ಕಾರಿ ಶಾಲೆಸೊರಬ
Share196Tweet123Send
Previous Post

ಶಾಸಕ ಡಾ. ಧನಂಜಯ ಸರ್ಜಿ ಮನವಿಗೆ ರಾಜ್ಯ ಸರ್ಕಾರ ಸ್ಪಂದನೆ

Next Post

ಮಲೆನಾಡಿನಲ್ಲಿ ನಿರಂತರ ಮಳೆ | ಜಲಾಶಯಗಳ ಒಳಹರಿವು ಹೆಚ್ಚಳ | ನೀರಿನ ಮಟ್ಟ ಎಷ್ಟಿದೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮಲೆನಾಡಿನಲ್ಲಿ ನಿರಂತರ ಮಳೆ | ಜಲಾಶಯಗಳ ಒಳಹರಿವು ಹೆಚ್ಚಳ | ನೀರಿನ ಮಟ್ಟ ಎಷ್ಟಿದೆ?

ಮಲೆನಾಡಿನಲ್ಲಿ ನಿರಂತರ ಮಳೆ | ಜಲಾಶಯಗಳ ಒಳಹರಿವು ಹೆಚ್ಚಳ | ನೀರಿನ ಮಟ್ಟ ಎಷ್ಟಿದೆ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಬಳ್ಳಾರಿ | ಸಂಜೀವರಾಯ ದೇವಸ್ಥಾನದಲ್ಲಿ ವಿದುಷಿ ದಿವ್ಯಾ ಗಿರಿಧರ್ ಅದ್ಭುತ ಗಾಯನ

ಬಳ್ಳಾರಿ | ಸಂಜೀವರಾಯ ದೇವಸ್ಥಾನದಲ್ಲಿ ವಿದುಷಿ ದಿವ್ಯಾ ಗಿರಿಧರ್ ಅದ್ಭುತ ಗಾಯನ

May 1, 2026
ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ | ಸೂಕ್ತ ಪರಿಹಾರ ನೀಡಲು ಡಾ. ಧನಂಜಯ ಸರ್ಜಿ ಮನವಿ

ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ | ಸೂಕ್ತ ಪರಿಹಾರ ನೀಡಲು ಡಾ. ಧನಂಜಯ ಸರ್ಜಿ ಮನವಿ

May 1, 2026
ಸೊರಬ | ಸಂಭ್ರಮದ ಶಿಖರಕ್ಕೆ ತಲುಪಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ | ನೂತನ ರಥದಲ್ಲಿ ಭವ್ಯ ಮೆರವಣಿಗೆ

ಸೊರಬ | ಸಂಭ್ರಮದ ಶಿಖರಕ್ಕೆ ತಲುಪಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ | ನೂತನ ರಥದಲ್ಲಿ ಭವ್ಯ ಮೆರವಣಿಗೆ

May 1, 2026
ನಟಿ ತಾರಾ, ಹಿರಿಯ ನಟ ಶಶಿಕುಮಾರ್ ಕೃಷ್ಣ ಮಠಕ್ಕೆ ಭೇಟಿ

ನಟಿ ತಾರಾ, ಹಿರಿಯ ನಟ ಶಶಿಕುಮಾರ್ ಕೃಷ್ಣ ಮಠಕ್ಕೆ ಭೇಟಿ

May 1, 2026
ಬಹುಭಾಷಾ ಚಲನಚಿತ್ರ `ವಿಲಕ್ಷ’ ಚಾಪ್ಟರ್-1 ಆ.14ರಂದು ವಿಶ್ವದಾದ್ಯಂತ ಬಿಡುಗಡೆ

ಬಹುಭಾಷಾ ಚಲನಚಿತ್ರ `ವಿಲಕ್ಷ’ ಚಾಪ್ಟರ್-1 ಆ.14ರಂದು ವಿಶ್ವದಾದ್ಯಂತ ಬಿಡುಗಡೆ

May 1, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL