ಶಿವಮೊಗ್ಗ ರೌಂಡ್ ಟೇಬಲ್-166 ಹಾಗೂ ಸರ್ಜಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನ.17 ರಂದು ಬೆಳಗ್ಗೆ 10 ಗಂಟೆಗೆ ನಗರದ ಸ್ಕೌಟ್ ಭವನದಲ್ಲಿ ವಿಶೇಷ ಚೇತನ ಮಕ್ಕಳ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಸ್ಕೌಟ್ ಭವನದ ಅಧ್ಯಕ್ಷ ರಮೇಶ್ ಶಾಸ್ತ್ರಿ, ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ, ಮೈಸೂರು ವಲಯ 13 ರ ಚೇರ್ಮನ್ ಎಚ್.ಎಚ್.ರಾಮ್, ನ್ಯಾಷನಲ್ ಕನ್ವಿನರ್ ಎಚ್.ಆರ್. ಅನಿಲ್ ರಾಜ್ , ನ್ಯಾಷನಲ್ ಟ್ವಿಂಕಲರ್ ಕನ್ವಿನರ್ ಸಿದ್ಧಾರ್ಥ ಶಾಸ್ತ್ರಿ ಭಾಗವಹಿಸುವರು. ಅಂದು ಮಕ್ಕಳಿಗಾಗಿ ಹಲವು ಮನರಂಜನಾ ಕಾರ್ಯಕ್ರಮಗಳ ಆಯೋಜಿಸಲಾಗಿದೆ. ಹಾಡು, ಡ್ಯಾನ್ಸ್, ಪೇಸ್ ಪೇಯಿಂಟಿಂಗ್,ಜಂಪಿಂಗ್ ಬೆಡ್, ಕಾಟನ್ ಕ್ಯಾಂಡಿ, ಚಾಕೋಲೇಟ್ ಫೌಂಟೆನ್, ವಿವಿಧ ಆಟೋಟಗಳು ಇರಲಿವೆ. ವಿವಿಧ ತಿನಿಸುಗಳನ್ನು ಮಕ್ಕಳು ಸವಿಯಬಹುದು. ಬುದ್ಧಿಮಾಂಧ್ಯತೆ ಹಾಗೂ ವಿಶೇಷಚೇತನ ಮಕ್ಕಳಿಗಾಗಿ ಇಂತಹ ಸ್ಪರ್ಧೆಗಳಲ್ಲಿ ಏರ್ಪಡಿಸುವುದರಿಂದ ಮಕ್ಕಳಲ್ಲಿ ಹೊಸ ಭಾವನೆಗಳು ಒಡಮೂಡುತ್ತವೆ, ಆಕಾಂಕ್ಷೆಗಳು ಗರಿಗೆದರುತ್ತವೆ, ವಿಭಿನ್ನ ಆಲೋಚನೆಗಳು ಬರುತ್ತವೆ ಎಂಬುದು ಕಾರ್ಯಕ್ರಮದ ಉದ್ದೇಶ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post