ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ 10 ವರ್ಷ ಮೇಲ್ಪಟ್ಟು 17 ವರ್ಷದಳೊಗಿನ ಉಪನಯನ ಆದ ತ್ರಿಮತಸ್ಥ ವಟುಗಳಿಗೆ ಏ.11 ರಿಂದ ಏ.25 ರವರೆಗೆ ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಶಿಬಿರವನ್ನು ಹಾಗೂ 12 ವರ್ಷ ಮೇಲ್ಪಟ್ಟು 17 ವರ್ಷದಳೊಗಿನ ಹೆಣ್ಣು ಮಕ್ಕಳಿಗೆ ಏ.11 ರಿಂದ ಏ.20 ರವರೆಗೆ ‘ವಸಂತ ಸಂಸ್ಕøತಿ ಶಿಬಿರವನ್ನು ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಅಧ್ಯಕ್ಷರು ಕೆ.ಸಿ. ನಟರಾಜ್ ಭಾಗವತ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರಗಳು ಪೂರ್ಣ ಉಚಿತವಾಗಿರುತ್ತದೆ. ಇದಕ್ಕೆ ಜಿಲ್ಲೆಯ ತ್ರಿಮಸ್ಥ ಬ್ರಾಹ್ಮಣ ವಟುಗಳು ಹಾಗೂ ತ್ರಿಮಸ್ಥ ಬ್ರಾಹ್ಮಣ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು.
ವಸಂತ ವೇದ ಶಿಬಿರದಲ್ಲಿ ಸಂಧ್ಯಾವಂದನೆ, ದೇವರ ಪೂಜೆ, ಸಂಸ್ಕೃತ ಸಂಭಾಷಣೆ, ನಿತ್ಯೋಪಯೋಗಿ ಸ್ತೋತ್ರಗಳು, ಸುಭಾಷಿತ, ಭಗವದ್ಗೀತೆ, ಇತಿಹಾಸ ಪುರುಷರ, ಸ್ವಾತಂತ್ರ್ಯ ಯೋಧರ ಹಾಗೂ ಪುರಾಣ ಪ್ರಸಿದ್ದ ಕಥೆಗಳು, ಯೋಗಾಸನ ದೇಸಿ ಕ್ರೀಡೆ ಇನ್ನೂ ಮುಂತಾದ ವಿಷಯಗಳ ಕುರಿತು ಬೋಧಿಸಲಾಗುವುದು ಇರುತ್ತದೆ ಎಂದರು.
Also read: ಬೆಚ್ಚಿ ಬಿದ್ದ ಕೊಡಗು | 6 ವರ್ಷದ ಕಂದಮ್ಮ ಸೇರಿ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ
ವಸಂತ ಸಂಸ್ಕೃತಿ ಶಿಬಿರದಲ್ಲಿ ಸಂಸ್ಕೃತ ಸಂಭಾಷಣೆ, ಪಂಚಾಂಗ ಮಾಹಿತಿ, ನಿತ್ಯೋಪಯೋಗಿ ಸ್ತೋತ್ರಗಳು, ಸುಭಾಷಿತ, ಭಗವದ್ಗೀತೆ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಅತಿಥಿ ಸತ್ಕಾರ, ರಂಗೋಲಿ, ಹೂ ಕಟ್ಟುವುದು, ಇತಿಹಾಸ ಪುರುಷರ ಹಾಗೂ ಇತಿಹಾಸ ಪುರುಷರ, ಸ್ವಾತಂತ್ರ್ಯ ಯೋಧರ ಹಾಗೂ ಪುರಾಣ ಪ್ರಸಿದ್ದ ಕಥೆಗಳು, ಯೋಗಾಸನ, ದೇಶೀಯ ಕ್ರೀಡೆ ಇನ್ನೂ ಮುಂತಾದ ವಿಷಯಗಳ ಕುರಿತು ಬೋಧಿಸಲಾಗುವುದು ಎಂದರು.
ಹೆಚ್ಚಿನ ಮಾಹಿತಿಗಾಗಿ ವಸಂತ ವೇದ ಶಿಬಿರಕ್ಕೆ ದಿನಮಣಿ – 8660135186, ವೇ.ಬ್ರ.ಶ್ರೀ. ಸುದರ್ಶನ ಭಟ್ಟರು – 9483022901, ಯು.ಎಸ್.ಕೇಶವಮೂರ್ತಿ – 9449327686, ಬಿ.ಕೆ.ವೆಂಕಟೇಶಮೂರ್ತಿ – 9449699012, ಎನ್.ವಿ.ಶಂಕರನಾರಾಯಣ – 7829903808 ಹಾಗೂ ವಸಂತ ಸಂಸ್ಕೃತಿ ಶಿಬಿರಕ್ಕೆ ಸರಳ ಹೆಗಡೆ – 9945462499, ಸವಿತಾ ಮಾಧವ್ – 9902699882, ಡಾ. ನಾಗಮಣಿ – 9980045317, ಸುಧಾ ಮಾಧವಾಚಾರ್ – 9845887180 ನ್ನೂ ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಎಂ ಕುಲಕರ್ಣಿ, ರಾಮಗೋಪಾಲ ಶಾಸ್ತ್ರೀ, ಕುಮಾರ್ ಶಾಸ್ತ್ರೀ, ಕೇಶವ ಮೂರ್ತಿ, ಸರಳ ಹೆಗಡೆ, ಶ್ರೀನಿವಾಸ್, ವೆಂಕಟೇಶ್ ಮೂರ್ತಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post