ಶಿವಮೊಗ್ಗ ದಸರಾದ Shivamogga Dasara ವಿಜಯ ದಶಮಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರುವ ಸಕ್ರೆಬೈಲು ಆನೆ ಬಿಡಾರದ ಆನೆಗಳಾದ ಸಾಗರ, ನೇತ್ರಾವತಿ ಮತ್ತು ಹೇಮಾವತಿಗೆ ಇಂದು ಪಾಲಿಕೆ ಮೇಯರ್ ನೇತೃತ್ವದಲ್ಲಿ ಆನೆ ಬಿಡಾರಕ್ಕೆ ತೆರಳಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
Also read: ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳು ತೆರೆಗೆ ಬರಲಿ: ಮಾಜಿ ಸಚಿವ ಈಶ್ವರಪ್ಪ ಆಶಯ
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮಿ ಶಂಕರ ನಾಯಕ್, ಜ್ಞಾನೇಶ್ವರ್, ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟೆಗಾರ್, ವೈದ್ಯರಾದ ಡಾ. ವಿನಯ್, ಆರ್‍ಎಫ್‍ಒ ವಿನಯ್ ಹಾಗೂ ಪಾಲಿಕೆ ಉತ್ಸವ ಸಮಿತಿಯ ಅಧ್ಯಕ್ಷ ಯು.ಹೆಚ್.ವಿಶ್ವನಾಥ್ ಹಾಗೂ ಸದಸ್ಯರಾದ ಮಂಜುನಾಥ್, ಸುವರ್ಣಾ ಶಂಕರ್, ಸುನೀತಾ ಅಣ್ಣಪ್ಪ, ಕಲ್ಪನಾ ರಾಮು, ಭಾನುಮತಿ ವಿನೋದ್ ಶೇಟ್, ಇ ವಿಶ್ವಾಸ್, ಯಮುನಾ ರಂಗೇಗೌಡ, ರೇಖಾರಂಗನಾಥ್, ಪ್ರಭು, ಆರತಿ ಆ.ಮಾ. ಪ್ರಕಾಶ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post