ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಆರ್ ಎಸ್ ಎಸ್ ಕಚೇರಿ ಮಧುಕೃಪಾದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರತಿಷ್ಠಾಪಿಸಲಾಗಿರುವ ಶ್ರೀ ಗಣಪತಿಯ ರಾಜಬೀದಿ ಉತ್ಸವ ಸೆಪ್ಟೆಂಬರ್ 20ರ ಬುಧವಾರ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ರಾಜಬೀದಿ ಉತ್ಸವ ಪಂಚವಟಿ ಕಾಲೋನಿಯ ಮಧುಕೃಪಾದಿಂದ ಹೊರಟು ಗೌಡ ಸಾರಸ್ವತ ಕಲ್ಯಾಣ ಮಂದಿರ ರಸ್ತೆ, ಹಳೇ ತೀರ್ಥಹಳ್ಳಿ ರಸ್ತೆ, ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ ಮಾರ್ಗವಾಗಿ ಸಾಗಿ ತುಂಗಾ ನದಿಯ ಭೀಮನ ಮಡುವಿನಲ್ಲಿ ವಿಸರ್ಜಿಸಲಾಗುವುದು.
ಕೇರಳದ ಸುಪ್ರಸಿದ್ದ ಚೆಂಡೆ ವಾದ್ಯಗಳೊಂದಿಗೆ ಶ್ರೀ ಗಣೇಶನ ರಾಜಬೀದಿ ಉತ್ಸವ ಕಂಗೊಳಿಸಲಿದೆ. ಹಿಂದೂ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಜಬೀದಿ ಉತ್ಸವದಲ್ಲಿ ಭಾಗವಹಿಸಲು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post