Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮದ್ಯಪಾನ ಮಾಡಿಕೊಂಡು ಚುನಾವಣಾ ಕರ್ತವ್ಯಕ್ಕೆ ಇಬ್ಬರು ಸಿಬ್ಬಂದಿಗಳು ಹಾಜರಾಗಿದ್ದ ಘಟನೆ ನಡೆದಿದೆ.
ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಾಗಿದ್ದ ಇಬ್ಬರು ಸಿಬ್ಬಂದಿಗಳು ಮದ್ಯಪಾನ ಮಾಡಿಕೊಂಡು ಬಂದಿರುವ ವಿಚಾರ ಜಿಲ್ಲಾಡಳಿತದ ಗಮನ ಬಂದಿದೆ. ತಕ್ಷಣವೇ ಇಬ್ಬರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ.
ಶಿವಮೊಗ್ಗ ಗ್ರಾಮಾಂತರ ಭಾಗದ ಮಸ್ಟರಿಂಗ್ ವೇಳೆಯಲ್ಲಿ ಈ ಇಬ್ಬರು ಸರ್ಕಾರಿ ನೌಕರರು ಪಾನಮತ್ತರಾಗಿ ಕರ್ತವ್ಯಕ್ಕೆ ಹಾಜರಾಗಿದ್ಧಾರೆ. ಇದನ್ನು ಮೇಲಾಧಿಕಾರಿಗಳು ಗಮನಿಸಿ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಪಾನಮತ್ತರಾಗಿ ಬಂದಿದ್ದ ಸಿಬ್ಬಂದಿಗಲ್ಲಿ ಓರ್ವ ಶಿಕ್ಷಕರಾಗಿದ್ದಾರೆ ಮತ್ತು ಇಲಾಖೆಯ ಸಿಬ್ಬಂದಿ ಎಂದು ಮೂಲಗಳಿಂದ ತಿಳಿದುಬಂದಿದೆ.
Discussion about this post