ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಸಂದರ್ಭದಲ್ಲಿ ಶಿಕ್ಷಣ. ಆರ್ಥಿಕ ನೀತಿ ಮತ್ತು ವಿವಿಧ ಬದಲಾವಣೆಯನ್ನು ನಮ್ಮ ದೇಶದಲ್ಲಿ ನೋಡುತ್ತಿದ್ದೇವೆ,ಕೋವಿಡ್ ಸಂಕಷ್ಟದ ಸಮಯದಲ್ಲಿ ಕೈಗಾರಿಕೆಗಳು ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿವೆ ಅವರಿಗೆ ಬೇಕಾಗುವ ಕೆಲವು ಸಡಿಲಿಕೆ ಮುಂದಿನ ದಿನದಲ್ಲಿ ಆಗುತ್ತದೆ ಎಂದು ಸಂಸದ ರಾಘವೇಂದ್ರ ಹೇಳಿದರು.
ನಗರದ ರಾಜ್ಯ ನೌಕರರ ಭವನದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಶಿವಮೊಗ್ಗ ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇವರ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ರಫ್ತುದಾರರ ಸಮಾವೇಶ ಮತ್ತು ರಫ್ತು ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗದಲ್ಲಿ ಕೃಷಿ ಜೊತೆಗೆ ಕೈಗಾರಿಕೆಗಳು ಹೆಚ್ಚಿನ ಕೆಲಸವು ಇಲ್ಲಿ ಆಗಿವೆ,ಬೃಹತ್ ಮಧ್ಯಮ ಹಾಗೂ ಸಣ್ಣ ಈ ರೀತಿಯ 20,294 ಕೈಗಾರಿಕೆಗಳು ನಮ್ಮ ಶಿವಮೊಗ್ಗದಲ್ಲಿದೆ. ಭದ್ರಾವತಿಯಲ್ಲಿ PPE ಮಾಡೆಲ್ ನಲ್ಲಿ ಮತ್ತೆ ಐರನ್ & ಸ್ಟಿಲ್ ಕೈಗಾರಿಕೆ ಪ್ರಾರಂಭವನ್ನು ಮಾಡುತ್ತೇವೆ, ಜಿಲ್ಲೆಯಲ್ಲಿ ಶಾಹಿ ಗಾರ್ಮೆಂಟ್ ಯೂನಿಟ್ ಗಳಿಂದ ಸುಮಾರು 20000 ಉದ್ಯೋಗ ಸೃಷ್ಟಿಯಾಗಿದೆ, ಇಂಡಸ್ಟ್ರಿಯಲ್ ಕರಿಡಾರ್ ಆಗುವ ಹಂತದಲ್ಲಿದೆ. ರಫ್ತುಗೆ ಮುಖ್ಯವಾಗಿ ಬೇಕಾಗಿರುವ ವಿಮಾನ ನಿಲ್ದಾಣ 3200 ಮೀ ರನ್ ವೇ ಹೊಂದಿದೆ ಉಡಾನ್ ಯೋಜನೆಯಲ್ಲಿ 5 ಪ್ರಮುಖ ಸಂಪರ್ಕದ ಮಾರ್ಗವನ್ನು ಕೇಂದ್ರಕ್ಕೆ ಸಲ್ಲಿಸಿದ್ದೇವೆ ಎಂದರು.
ಆರ್ಯ ವೈಶ್ಯ ನಿಗಮದ ಅಧಕ್ಷ ಡಿ. ಎಸ್ ಅರುಣ್. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೇ. ಆರ್ ವಾಸುದೇವ, ಎಂ.ಎ ರಮೇಶ್ ಹೆಗ್ಡೆ, ಫೇವರ್ ಚಂದ್, ಉಮೇಶ್ ಶಾಸ್ತ್ರಿ, ಎ.ಎಂ ಸುರೇಶ್ ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post