ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡೆಂಗ್ಯೂ #Dengue ನಿಯಂತ್ರಿಸುವಲ್ಲಿ ವಿಫಲರಾದ ರಾಜ್ಯ ಸರ್ಕಾರದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, #Dinesh Gundurao ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಪ್ರಕೋಷ್ಟಗಳ ಸಂಯೋಜಕ ಎಸ್. ದತ್ತಾತ್ರಿ ಆಗ್ರಹಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡೆಂಗ್ಯೂ ಮಹಾಮಾರಿ ರಾಜ್ಯದಲ್ಲಿ ಕಾಡುತ್ತಿದೆ. ಆರೋಗ್ಯ ಇಲಾಖೆಗೆ ಗೊತ್ತಿದೆ. ಆದರೂ, ಪೂರ್ವ ತಯಾರಿ ಮಾಡದ ಪರಿಣಾಮ ಹೆಚ್ಚಳವಾಗಿದ್ದು, 1,05 ಲಕ್ಷ ಶಂಕಿತ ಪ್ರಕರಣಗಳಿವೆ. 4827 ಪಾಸಿಟಿವ್, 07 ಮಂದಿ ಮೃತಪಟ್ಟಿದ್ದಾರೆ. ಸಾಗರದ ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ನಾಗರಾಜ್ ಕೂಡ ಡೆಂಗ್ಯೂಗೆ ಬಲಿಯಾಗಿದ್ದಾರೆ. ಹಾಸನ ಐದು ಡೆಂಗ್ಯೂ ಪೀಡಿತರು ಮೃತಪಟ್ಟಿದ್ದಾರೆ. ಆದರೂ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ ಎಂದರು.
ಡೆಂಗ್ಯೂ ಬಂದರೆ ಎಲಿಸಾ ಪರೀಕ್ಷೆ ಮಾಡಬೇಕು. ಶಿವಮೊಗ್ಗದಲ್ಲಿ ಕೇವಲ ಒಂದು ಕಡೆ ಮಾತ್ರ ಸೌಲಭ್ಯ ಇದೆ. ಇದನ್ನು ತಾಲೂಕು ವ್ಯಾಪ್ತಿಗೆ ವಿಸ್ತರಿಸಬೇಕು. ಜಿಲ್ಲೆಯಲ್ಲಿ 592 ಶಂಕಿತ ಪ್ರಕರಣಗಳಿದ್ದು, ಝೀಕಾ ವೈರಸ್ ಗೆ ಒಂದು ಬಲಿಯಾಗಿದ್ದು, ಎರಡು ಪ್ರಕರಣಗಳು ಪಾಸಿಟಿವ್ ಇದೆ ಎಂದರು.
Also read: ಕೇಂದ್ರ ಬಜೆಟ್’ಗೆ ದಿನಾಂಕ ನಿಗದಿ | ಇತಿಹಾಸ ನಿರ್ಮಿಸಲಿದ್ದಾರೆ ನಿರ್ಮಲಾ ಸೀತಾರಾಮನ್
ಸೊಳ್ಳೆಗಳ ಉತ್ಪಾದನಾ ಕೇಂದ್ರ ನಿರ್ಮೂಲನೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಫಾಗಿಂಗ್ ಮಾಡುತ್ತಿಲ್ಲ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾತ್ರ ಎಲಿಸಾ ಪರೀಕ್ಷೆ ಅವಕಾಶ ಇದೆ. ಪ್ರತಿದಿನ 50 ಜನರಿಗೆ ಪರೀಕ್ಷೆ ಮಾಡಬಹುದು. ಮತ್ತೊಂದು ಪರೀಕ್ಷಾ ಕೇಂದ್ರ ಆರಂಭ ಮಾಡಬೇಕು. ಸರ್ಕಾರಿ ಆಸ್ಪತ್ರೆಯಲ್ಲೂ 500 ರೂ. ಪರೀಕ್ಷೆ ಆಗುತ್ತಿದೆ. ಸರ್ಕಾರ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಪರೀಕ್ಷೆ ಮಾಡಬೇಕು. ಬಿಳಿ ರಕ್ತಕಣಗಳ ಪ್ರತ್ಯೇಕ ಮಾಡುವ ವ್ಯವಸ್ಥೆ ತಾಲೂಕು ಕೇಂದ್ರದಲ್ಲಿ ಇಲ್ಲ. ಮೆಗ್ಗಾನ್ ಆಸ್ಪತ್ರೆ 600 ರು. ಹಣ ಕೊಡಬೇಕು. ಪುನಃ ರಕ್ತ ಕೊಡಬೇಕು. ಖಾಸಗಿ ಆಸ್ಪತ್ರೆ 1000 ರೂ. ಶುಲ್ಕ ಕೊಡಬೇಕು. ಬಿಪಿಎಲ್ ಕಾರ್ಡ್ ಇದ್ದವರಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಪರೀಕ್ಷೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದರು.
ಪ್ರತಿ ಜಿಲ್ಲೆಗ ಓರ್ವ ಐಎಎಸ್ ಅಧಿಕಾರಿ ನೋಡಲ್ ಅಧಿಕಾರಿ ಆಗಿ ನೇಮಕ ಮಾಡಬೇಕು. ಬಿಪಿಎಲ್ ಕಾರ್ಡ್ ದಾರರಿಗೆ ಖಾಸಗಿ ಲ್ಯಾಬ್ ಗಳಲ್ಲಿಯೂ ಉಚಿತ ಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿದರು.
ಮೂಡಾ ಹಗರಣ, ವಾಲ್ಮೀಕಿ ನಿಗಮ ಹಗರಣ ಇನ್ನಿತರ ಹಗರಣಗಳಲ್ಲಿ ಭಾಗಿಯಾಗಿರುವ ಸರ್ಕಾರ ಅದನ್ನು ಮುಚ್ಚಿ ಹಾಕುವ ಕಡೆ ಗಮನಹರಿಸುತ್ತಿದೆ. ನಾಗರೀಕರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದೆ. ಸೊಳ್ಳೆ ಉತ್ಪತ್ತಿ ಕೇಂದ್ರ ನಾಶ ಮಾಡಬೇಕು. ಫಾಗಿಂಗ್ ಮಾಡಬೇಕು. ನಾಗರಿಕರು ಕೂಡ ಯಾವುದೇ ಜ್ವರಕ್ಕೆ ನಿರ್ಲಕ್ಷ್ಯ ಮಾಡಬಾರದು. ಮತತು ತಮ್ಮ ಪರಿಸರ ಸ್ವಚ್ಛವಾಗಿಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಶಿವರಾಜ್, ಡಾ.ಸುರೇಶ್, ಡಾ.ಹೇಮಂತ್, ಹೃಷಿಕೇಶ್ ಪೈ, ವಿನ್ಸೆಂಟ್, ಶ್ರೀನಿವಾಸ ರೆಡ್ಡಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post