ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮನ್ವಯ ಸಮೃದ್ಧಿ ಯುವಕರ ಸಂಘ, ಸ್ನೇಹಜೀವಿ ರಾಘುಗೌಡರ ನೇತೃತ್ವದ ಗೋಪಾಳ ಫ್ರೆಂಡ್ಸ್ ಸಹಭಾಗಿತ್ವದಲ್ಲಿ ಜ.23, 24 ಹಾಗೂ 25ರಂದು ಗೋಪಾಳದ ಶ್ರೀ ಆದಿ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯಮಟ್ಟದ ಮೂರು ದಿನಗಳ ಹೊನಲು ಬೆಳಕಿನ ಲೀಗ್ ಮಾದರಿಯ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ #Cricket tournament ಫ್ರೆಂಡ್ಸ್ 11 ಟ್ರೋಫಿ-2026ನ್ನು ಆಯೋಜಿಸಲಾಗಿದೆ ಎಂದು ಯುವ ಮುಖಂಡ ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ನಾಲ್ಕನೇ ಬಾರಿಯ ಪಂದ್ಯಾವಳಿಯಾಗಿದ್ದು, ಪ್ರಥಮ ಬಹುಮಾನ 1.5 ಲಕ್ಷ, 2ನೇ ಬಹುಮಾನ 70 ಸಾವಿರ , ತೃತೀಯ 25 ಸಾವಿರ, ಚತುರ್ಥ 15 ಸಾವಿರ ರೂ. ನಗದು ಬಹುಮಾನದೊಂದಿಗೆ ಶಾಶ್ವತ ಫಲಕ ನೀಡಲಾಗುವುದು. ಒಟ್ಟು 32 ತಂಡಗಳು ಭಾಗವಹಿಸುತ್ತಿದ್ದು, ಇದರಲ್ಲಿ ಶಿವಮೊಗ್ಗದ 16 ತಂಡಗಳಿವೆ ಎಂದರು.
ಪಂದ್ಯ ಸರಣಿ ಶ್ರೇಷ್ಠಕ್ಕೆ ಹೀರೋ ಹೊಂಡಾ ಬೈಕ್ ಹಾಗೂ ಉತ್ತಮ ಬೌಲರ್ ಹಾಗೂ ಬ್ಯಾಟಿಂಗ್‍ಗೆ ಬೈಸಿಕಲ್‍ನ್ನು ಬಹುಮಾನವಾಗಿ ನೀಡಲಾಗುವುದು ಎಂದರು.
ಜ.23ರ ಸಂಜೆ 7ಕ್ಕೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಉಪವಿಭಾಗಾಧಿಕಾರಿ ಸತ್ಯನಾರಾಯಣ ಜಿ.ಹೆಚ್. ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಜ.24ರ ಸಂಜೆ 7ಕ್ಕೆ ಸಾಧಕರಿಗೆ ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾಪೂರ್ಯನಾಯ್ಕ, ಡಿ.ಎಸ್.ಅರುಣ್, ಡಾ.ಧನಂಜಯಸರ್ಜಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಜ.25ರ ಸಂಜೆ 7ಕ್ಕೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಸೂಡಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಡಿಸಿಸಿ ಬ್ಯಾಂಕ್ ನಿರ್ದೆಶಕ ಎಂ.ಶ್ರೀಕಾಂತ್, ರಾಜ್ಯ ಕೈಮಗ್ಗ ಮೂಲ ಸೌಕರ್ಯ ಮಂಡಳಿ ಅಧ್ಯಕ್ಷ ಚೇತನ್ ಎ.ಗೌಡ, ಮುಖಂಡರಾದ ಕಲಗೋಡು ರತ್ನಾಕರ್, ಹೆಚ್.ಸಿ.ಯೋಗೀಶ್, ವಿಜಯ್‍ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಿರಂಜೀವಿ ಬಾಬು, ನರಸಿಂಹ ಗಂಧದ ಮನೆ, ಸೈಪು, ಲೋಹಿತ್, ಗೋಪಿ ಮೊದಲಿಯಾರ್, ಪ್ರದೀಪ್ ಕಾವಾಡ್ ಇನ್ನಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















