ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿರುಪಯುಕ್ತವಾದ ವಸ್ತುಗಳನ್ನು ಪುನರ್‌ಬಳಕೆ ಮಾಡಿಕೊಳ್ಳಲು ಹಲವು ಅವಕಾಶಗಳಿದ್ದು, ಈ ವಸ್ತುಗಳನ್ನು ತಯಾರಿಸಲು ತಂತ್ರಗಾರಿಕೆ ಅತ್ಯಗತ್ಯ. ಇದರಿಂದಾಗಿ ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಲು ಸಾಧ್ಯ ಎಂದು ಬೆಂಗಳೂರಿನ ಪೈರೋ ಟೆಕ್ನಾಲಜೀಸ್‌ನ ತಾಂತ್ರಿಕ ವಿಭಾಗದ ಮುಖ್ಯಸ್ಥ ರಾಜೀವ್ ದೀಕ್ಷಿತ್ ನುಡಿದರು.
ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಹಾಗೂ ಕ್ಲಸ್ಟರ್ ಫೋರಂಗಳ ಸಹಯೋಗದಲ್ಲಿ ‘ಹಸಿರು ರಸಾಯನಶಾಸ್ತ್ರ: ಭವಿಷ್ಯದ ನಾವೀನ್ಯತೆಗಾಗಿ’ ಎಂಬ ವಿಷಯದ ಕುರಿತು ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.
ನಮ್ಮ ದಿನನಿತ್ಯದ ಬಳಕೆಯಲ್ಲಿ ಹಾನಿಕಾರಕ ರಸಾಯನಿಕ ಪದಾರ್ಥಗಳನ್ನು ಹೇಗೆ ಬೇರೆ ರೂಪಕ್ಕೆ ರೂಪಾಂತರಿಸಿ ಉಪಯುಕ್ತತೆಯನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಮೆಟಲ್ ಫಿನಿಶಿಂಗ್ ಮತ್ತು ಸರ್‌ಫೇಸಿಂಗ್‌ನಲ್ಲಿ ಬಳಕೆ ಮಾಡಬಹುದಾದ ಲೋಹಗಳ ಬಗ್ಗೆ ತಿಳಿಸಿದರು.
ಕಬ್ಬಿಣದ ಆಕ್ಸೆಡ್ ಮತ್ತು ಬಂಗಾರದ ಆಕ್ಸೆಡ್ ಎರಡಕ್ಕೂ ಇರುವ ವ್ಯತ್ಯಾಸ, ಯಾವುದೇ ಲೋಹದ ತುಕ್ಕು ಹಿಡಿಯುವಿಕೆಯನ್ನು ಸಾಮಾನ್ಯವಾದ ಸಿಟ್ರಿಕ್ ಆಸಿಡ್ ಉಪಯೋಗಿಸಿ ಕಡಿಮೆ ಮಾಡಬಹುದು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಮ್ ಸುದರ್ಶನ್, ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ ಯಶಸ್ವಿತ ಚೌವ್ಹಾನ್, ಕಾರ್ಯಕ್ರಮ ಸಂಯೋಜಕರಾದ ರಾಧಿಕ ಹಾಗೂ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಮೂರೂ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕು.ಕುಮುದ ನಿರೂಪಿಸಿದರು. ಖತೀಜ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಕು. ಮಧುಶ್ರೀ ಡಿ ಎಂ ಸ್ವಾಗತಿಸಿ. ಕು. ಸ್ಫೂರ್ತಿ ಅವರು ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post