ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೀದಿ ನಾಯಿಗೆ ಬಲೆ ಹಾಕಿ ಸೆರೆ ಹಿಡಿದು ಅದನ್ನು ಕ್ರೂರವಾಗಿ ಹೊಡೆದು ಸಾಯಿಸಿರುವ ಘಟನೆ ನಗರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿದೆ.
ಗೋಪಾಳ ಪೊಲೀಸ್ ಲೇಔಟ್ ಬಳಿಯ ವೃದ್ಧಾಶ್ರಮದ ಎದುರು ಘಟನೆ ನಡೆದಿದ್ದು, ಈ ಕುರಿತಂತೆ ದೂರು ದಾಖಲಾಗಿದೆ.

ಗೋಪಾಳದ ವೃದ್ಧಾಶ್ರಮದ ಎದುರಿನಲ್ಲಿ ಖಾಸಗಿ ಹಂದಿ ಹಿಡಿಯುವ ಗೊಂಪೊಂದು ಸಮುದಾಯದ ಬೀದಿ ನಾಯಿಯನ್ನು ಬಲೆ ಹಾಕಿ ಹಿಡಿದಿದೆ. ಹಿಡಿದ ನಂತರ ದೊಣ್ಣೆಯಿಂದ ಆ ನಾಯಿಗೆ ಹಿಗ್ಗಾಮುಗ್ಗಾ ಹೊಡೆದು ಸಾಯಿಸಿದ್ದಾರೆ.
ಹೊಡೆತ ತಾಳಲಾರದೇ ಕೂಗುತ್ತಾ, ನರಳಿ ನರಳಿ ನಾಯಿ ಪ್ರಾಣ ಬಿಟ್ಟಿದೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ.

ಘಟನೆ ಹಿನ್ನೆಲೆಯಲ್ಲಿ ಪ್ರಾಣಿ ರಕ್ಷಣಾ ತಂಡದ ಸದಸ್ಯರಾದ ಎಸ್. ಸೂರಜ್ ಎನ್ನುವವರು ತುಂಗಾನಗರ ಠಾಣೆಗೆ ಲಿಖಿತ ದೂರು ದಾಖಲಿಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ನಾಯಿಯ ಕ್ರೂರ ಹತ್ಯೆ ಮಾಡಿದವರು ದೂರಿನ ಹಿನ್ನೆಲೆಯಲ್ಲಿ ಪೊಲೀಸರು 0723/2025 ಕಲಂ 11 (1) The Prevention of cruelty to Animal (PCA) Act 1960 & ಕಲಂ 325 ಬಿ ಎನ್ ಎಸ್ ಅಡಿಯಲ್ಲಿ ಐಫ್’ಐಆರ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post