ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘ, ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಹಿರಿಯ ವಿದ್ಯಾರ್ಥಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕಾಲೇಜಿನ ಸಭಾಂಗಣದಲ್ಲಿ ಸುಗ್ಗಿ ಸಂಭ್ರಮ ಎಂಬ ವಿಶೇಷ ಕಾರ್ಯಕ್ರಮವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮೀಣ ಪ್ರದೇಶದ ಸುಗ್ಗಿಯನ್ನು ನೆನಪಿಗೆ ತರುವಂತಹ ಈ ಕಾರ್ಯಕ್ರಮವನ್ನು ರೂಪಿಸುವಲ್ಲಿ ವಿದ್ಯಾಥಿಗಳ ಶ್ರಮ ಎದ್ದು ಕಾಣುತ್ತಿತ್ತು. ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ನೆನಪಿಗೆ ತರುವಂತೆ ವಿವಿಧತೆಯಲ್ಲಿ ಏಕತೆಯ ಸಂಸ್ಕøತಿಯನ್ನು ಬಿಂಬಿಸುವಂತೆ ಈ ಕಾರ್ಯಕ್ರಮವಿದ್ದು, ಕಾರ್ಯಕ್ರಮಕ್ಕೂ ಮೊದಲು ಮಕ್ಕಳು ಸಾಂಸ್ಕøತಿಕ ಜಾಥಾ ನಡೆಸಿದರು.
ನಂತರ ರಾಶಿಪೂಜೆ ನಡೆಯಿತು. ಸಂಕ್ರಾಂತಿಯ ಮೊದಲೇ ಎಳ್ಳುಬೀರಲಾಯಿತು. ಹಳ್ಳಿಯ ವಾತಾವರಣ ಅಲ್ಲಿ ನಿರ್ಮಿಸಲಾಗಿತ್ತು. ಬಣ್ಣ ಬಣ್ಣದ ರಂಗೋಲಿಯ ಚಿತ್ತಾರಗಳನ್ನು ಬಿಡಿಸಲಾಗಿತ್ತು. ತಳಿರು-ತೋರಣಗಳಿಂದ ಅಲಂಕೃತಗೊಳಿಸಲಾಗಿತ್ತು. ಗೌರಿಪೂಜೆ ಕೂಡ ನಡೆಯಿತು. ಇದೊಂದು ಸಂಭ್ರಮದ ಸುಗ್ಗಿಯ ಹಬ್ಬ ಎಂದು ಕಾಲೇಜಿನ ವಿದ್ಯಾರ್ಥಿಗಳಾದ ಆಶಾ ಮತ್ತಿತರರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯ ಸಿವಿಲ್ ನ್ಯಾಯಾಧೀಶ್ ಸಂತೋಷ್ ಎಂ.ಎಸ್. ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು. ತಂದೆ ವಕೀಲರಾಗಿದ್ದರೂ ಎಂಬ ಕಾರಣಕ್ಕೆ ನಾನು ವಕೀಲನಾಗಲಿಲ್ಲ. ಆದರೆ ತಂದೆಯ ಜೊತೆ ಹಳ್ಳಿಯ ದಾರಿಯಲ್ಲಿ ಬರುವಾಗ ನಮ್ಮ ತಂದೆಗೆ ಜನರು ನಮಸ್ಕಾರ ಮಾಡಿ ಅತ್ಯಂತ ಗೌರವ ಕೊಡುತ್ತಿದ್ದರು. ವಕೀಲರಿಗೆ ಘನತೆ ಮತ್ತು ಗೌರವ ಬರುತ್ತದೆ ಎಂಬ ಕಾರಣಕ್ಕಾಗಿ ನಾನು ವಕೀಲನಾಗಬೇಕು ಎಂದು ಮನಸ್ಸುಮಾಡಿ ವಕೀಲನಾಗಿ ನ್ಯಾಯಾಧೀಶನಾದೆ ಎಂಬ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.
ಶಿಕ್ಷಕ ವೃತ್ತಿ ಕೂಡ ಅತ್ಯಂತ ಗೌರವಯುತವಾದದ್ದು. ನಾನು ವಕೀಲನಾಗಲು ನನಗೆ ಪಾಠ ಹೇಳಿದ ಶಿಕ್ಷಕರೇ ಕಾರಣ. ಮಕ್ಕಳು ಶಿಕ್ಷಕರಿಗೆ, ಹಿರಿಯರಿಗೆ ಗೌರವಕೊಡಿ, ಕಷ್ಟಪಟ್ಟು ಓದಿ ಹಳ್ಳಿಯ ಸಂಸ್ಕೃತಿಯನ್ನು ಮರೆಯಬೇಡಿ ಇಂತಹ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿ ಇಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಎ. ರಮೇಶ್ಹೆಗಡೆ ವಹಿಸಿದ್ದರು. ಪ್ರಾಚಾರ್ಯರಾದ ಡಾ.ಎ. ಅನಲ, ಒಕ್ಕಲಿಗರ ಸಂಘದ ಪದಾಧಿಕಾರಿಗಳಾದ ಕೆ.ಪಿ. ಪುಟ್ಟಸ್ವಾಮಿ, ಬಿ.ಎಸ್. ಅಶಿತ್, ಸುಮಿತ್ರ ಕೇಶವಮೂರ್ತಿ, ಹೆಚ್.ಬಿ. ಸುದರ್ಶನ್ ತಾಯಿಮನೆ, ಆಡಳಿತಾಧಿಕಾರಿ ಟಿ.ಪಿ. ನಾಗರಾಜ್, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಧು ಜಿ. ಮುಂತಾದವರಿದ್ದರು. ಸಂಜೆ ಕೂಡ ದೀಪದಾನ ಕಾರ್ಯಕ್ರಮ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















