ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮೆಲ್ಲರ ಬದುಕು ಅತ್ಯಮೂಲ್ಯ ಹಾಗೂ ರಹಸ್ಯಾತ್ಮಕ. ಬದುಕಿದ್ದಾಗ ಕನಿಷ್ಠ ನಾಲ್ಕು ಜನರಿಗಾದರೂ ಬದುಕನ್ನು ಕೊಡುವಂತಿರಬೇಕು. ಒಳ್ಳೆಯ ಚಿಂತನೆ, ಒಳ್ಳೆಯ ಕೆಲಸ ಮಾಡುತ್ತಾ ನೂರು ವರ್ಷ ಬದುಕಿರಿ ಎಂಬುದು ಋಷಿ ಮುನಿಗಳು ಆಶೀರ್ವದಿಸುತ್ತಾರೆ. ಅದೇ ರೀತಿ ನಮ್ಮಲ್ಲಿರುವ ಆರು ಶತ್ರುಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ತೊರೆದು ಇಂದ್ರೀಯ ನಿಗ್ರಹಗಳ ಮೂಲಕ ಆ ಆರು ಶತ್ರುಗಳನ್ನು ಜಯಿಸಿದರೆ ಬದುಕು ಪರಿಪೂರ್ನತೆಗೊಳ್ಳುತ್ತದೆ ಎಂದು ಹರಿಹರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು ಹೇಳಿದರು.
ಅವರು ಇಂದು ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಶ್ರೀ ಶೈನೈಶ್ಚರ ದೇವಾಲಯ ಸಮಿತಿ ಟ್ರಸ್ಟ್ ವಿನೋಬನಗರ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ದೇವಾಲಯದ ಗರ್ಭಗುಡಿಗೆ ಕವಚ ಸಮರ್ಪಣೆ, ಲೋಕಕಲ್ಯಾಣಾರ್ಥವಾಗಿ ನಡೆಯುತ್ತಿರುವ ಶ್ರೀ ಯಜುಸಂಹಿತಾ ಯಾಗ ಮತ್ತು ವೇದನಾರಾಯಣಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಭೀಮೇಶ್ವರ ಜೋಶಿ Dr. Bhimeshwara Joshi ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಜ್ಞಕ್ಕೂ ಜೀವನಕ್ಕೂ ಸಾಮ್ಯವಿದೆ. ಜೀವನ ಎಂಬ ಯಜ್ಞದಲ್ಲಿ ರಾಗ, ದ್ವೇಷ, ಕೆಟ್ಟ ಸಂಸ್ಕಾರ, ಕೆಟ್ಟ ಚಿಂತನೆ ಮತ್ತು ಕೆಟ್ಟ ಹವ್ಯಾಸಗಳನ್ನು ಪೂರ್ಣಾಹುತಿ ನೀಡಿದಾಗ ಮಾತ್ರ ಜೀವನದಲ್ಲಿ ಧನ್ಯತೆ ಉಂಟಾಗುತ್ತದೆ ಎಂದರು.

Also read: ವೈಯಕ್ತಿಕ ಹಿತಾಸಕ್ತಿಯಿಂದ ಪಿಐಎಲ್ ಸಲ್ಲಿಸಿದರೆ ದಂಡ ಗ್ಯಾರೆಂಟಿ! ಹೈಕೋರ್ಟ್ ಎಚ್ಚರಿಕೆ
ಒಂದು ದೇವಾಲಯ ಯಾವ ರೀತಿಯ ಸತ್ಕಾರ್ಯಗಳನ್ನು ಮಾಡಬಹುದು ಎನ್ನುವುದಕ್ಕೆ ರವೀಂದ್ರನಗರದ ಗಣಪತಿ ದೇವಸ್ಥಾನದಲ್ಲಿ ನಿರಂತರವಾಗಿ ಭಜನೆ, ಕೀರ್ತನೆ, ಯಕ್ಷಗಾನ, ವೇದ ಪಾಠ, ಸಂಸ್ಕೃತ ಕಾರ್ಯಕ್ರಮಗಳು, ಉಪನ್ಯಾಸಗಳು, ಸಂಸ್ಕಾರ ಬೆಳೆಯಲು ಮತ್ತು ಸಂಸ್ಕೃತಿ ಕಾಪಾಡಲು ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಹಮ್ಮಿಕೊಂಡು ಕಲೆ ಮತ್ತು ಸಂಸ್ಕೃತಿಯ ಪೋಷಕರಾಗಿ ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.

ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಮಾತನಾಡಿ, ಅ.ಪ. ರಾಮಭಟ್ಟರು ನಮ್ಮಂತಹ ಲಕ್ಷಾಂತರ ಜನರಿಗೆ ಮಾರ್ಗದರ್ಶಕರು. ಅವರು ಹುಟ್ಟಿದ ಊರು ಶರಾವತಿ ಉಗಮ ಸ್ಥಾನ ಅಂಬುತೀರ್ಥ. ಆ ಸ್ಥಳದ ಅಭಿವೃದ್ಧಿ ಬಗ್ಗೆ ಅವರು ಕನಸು ಕಂಡಿದ್ದರು. ಹಾಗೂ ಅದನ್ನು ಸಂಸದರ ಬಳಿ ಹೇಳಿದ ತದನಂತರ ಪ್ರಸ್ತುತ ಸರ್ಕಾರದಿಂದ ಅದ್ಭುತವಾಗಿ ಅಭಿವೃದ್ಧಿಯಾಗಿದೆ. ಅದೇ ರೀತಿ ಅವರ ಇನ್ನೊಂದು ಕನಸು ರಾಗಿಗುಡ್ಡದಲ್ಲಿ ದೇವಸ್ಥಾನ ಸ್ಥಾಪಿಸಿ ಪ್ರವಾಸೋದ್ಯಮ ಕ್ಷೇತ್ರ ಮಾಡಬೇಕು ಎನ್ನುವುದಾಗಿದ್ದು, ಅದಕ್ಕೂ ಕೂಡ ಸರ್ಕಾರ 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲಾ ಬ್ರಾಹ್ಮಣ ಮಹಾಸಾಭಾ ಅಧ್ಯಕ್ಷ ನಟರಾಜ್ ಭಾಗವತ್ ಮಾತನಾಡಿ, 32 ಬಾರಿ ಸಂಹಿತಾಯಾಗ ಮಾಡಿ, ನವರಾತ್ರಿ ಸಂದರ್ಭದಲ್ಲಿ ಚಂಡಿಕಾಯಾಗ, ಸಂಕಷ್ಟ ಚತುರ್ಥಿಯಂದು ವಿಶೇಷ ಪೂಜೆ ಏರ್ಪಡಿಸಿ ಇಡೀ ಅರ್ಚಕ ಸಮೂಹಕ್ಕೆ ಅ.ಪ. ರಾಮಭಟ್ಟರು ಮಾದರಿಯಾಗಿದ್ದಾರೆ. ವೇದ ಶಿಬಿರ, ಮುಷ್ಠಿ ಅಕ್ಕಿ ಸಂಗ್ರಹ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿದರು. ತಮಗೆ ಸ್ವಂತ ಮನೆ ಇಲ್ಲದಿದ್ದರೂ ತಮಗೆ ಅನಾರೋಗ್ಯವಾದಾಗ ಶಸ್ತ್ರಚಿಕಿತ್ಸೆಗೆ ಒಳಗಾದಾಗಲೂ ತನಗೆ ಬಂದ ಎರಡು ಲಕ್ಷ ರೂ.ಗಳನ್ನು ಸುರಭಿ ಗೋಶಾಲೆಗೆ ದಾನ ಮಾಡಿ ಔದಾರ್ಯ ಮೆರೆದವರು. ಜಾತಿ, ಮತ ಬೇಧವಿಲ್ಲದೇ ಎಲ್ಲಾ ಹಿಂದೂ ಸಮಾಜದ ಬಾಂಧವರನ್ನು ಧರ್ಮಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದವರು ಎಂದು ಹೇಳಿದರು.










Discussion about this post