ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಳ್ಮೆ ಮತ್ತು ಸತತ ಪರಿಶ್ರಮದ ಮೂಲಕ ವಿದ್ಯಾರ್ಥಿಗಳು ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ವಿಜೇತ, ಪತ್ರಿಕೆ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆವರಣದಲ್ಲಿ ಸಹ್ಯಾದ್ರಿ ವಾಣಿಜ್ಯ ನಿರ್ವಹಣಾ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಘಟಕ -1 ಮತ್ತು 2ರ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಫೋಟೋಗ್ರಫಿ ವಿಷಯದ ಕುರಿತು ತರಬೇತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಬದುಕಿನ ಪ್ರತಿ ಕ್ಷಣದ ಸಿಹಿ, ಕಹಿ , ನೆನಪಿನ ಬುತ್ತಿಯನ್ನು ಛಾಯಾಚಿತ್ರಗಳು ಮರು ನೆನಪಿಸುತ್ತ ಹೊಸ ಸಾಧನೆಗೆ ಪ್ರೇರಣೆ ನೀಡುತ್ತದೆ,ಅಲ್ಲದೆ ನಮ್ಮ ಗತ ಕಾಲದ ದಿಂದ ಇತ್ತೀಚಿನ ವರೆಗೆ ಆದಂತಹ ಬದಲಾವಣೆಯನ್ನು ನೋಡಲು ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ಎಸ್ಎಸ್ ಘಟಕ 1 ರ ಕಾರ್ಯಕ್ರಮಾದಿಕಾರಿ ಡಾ. ಪ್ರಕಾಶ್ ಮರಗನಹಳ್ಳಿ, ಪರಶುರಾಮ್ ಪ್ರಾಧ್ಯಾಪಕರಾದ ಡಾ. ಗಿರಿಧರ್.ಕೆ.ವಿ, ಗ್ರಂಥಪಾಲಕರಾದ ಮಜುನಾಥ್ ಲೋಹಾರ್, ಸಹ ಶಿಬಿರಾಧಿಕಾರಿಗಳಾದ ಡಾ. ಲವ. ಜಿ.ಆರ್, ಮಮತಾ , ರಮ್ಯ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post