ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಾಹ್ಯಾಕಾಶ ಯಾನಿ ಸುನೀತಾ ವಿಲಿಯಮ್ಸ್ #Suneetha Wiliams ಮತ್ತು ಅವರ ಸಹಯಾತ್ರಿ 285 ದಿನಗಳ ಬಳಿಕ ಮರಳಿ ಭೂಮಿಗೆ ಬಂದ ಹಿನ್ನೆಲೆಯಲ್ಲಿ ಇಲ್ಲಿನ ಆರ್ಯ ಪಿಯು ವಿಜ್ಞಾನ ಕಾಲೇಜಿನಲ್ಲಿ ಸಂಭ್ರಮಾಚರಣೆಯನ್ನು ಆಚರಿಸಿ, ಮಕ್ಕಳಿಗೆ ಸಿಹಿ ಹಂಚಿ ಸ್ವಾಗತ ಕೋರಲಾಯಿತು.
ಕಾಲೇಜಿನ ವರಾಂಡದಲ್ಲ ಅಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ದಲ್ಲಿ ಮಾತನಾಡಿದ ವಿಜ್ಞಾನಿ ಶೇಖರ್ ಗೌಳೇರ್ ಸುನಿತಾ ಭೂಮಿಗೆ ಬರುವ ಆಸೆಯೇ ಕ್ಷೀಣಿಸಿತ್ತು. ಆದರೆ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ, ಮುಂದೊಂದು ದಿನ ಅಂತರಿಕ್ಷವೂ ನಮ್ಮ ನಿಲ್ದಾಣವೇ ಆಗಲಿದೆ ಅದಕ್ಕೆಲ್ಲ ಸುನಿತಾರಂತವರು ಕಾರಣರಾಗುತ್ತಾರೆ, ಇಡೀ ಜಗತ್ತೇ ಹೆಮ್ಮೆಪಡುವ ವಿಚಾರವಿದು ಅಂತರೀಕ್ಷದ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಾಯನಗಳು ನಡೆಯುತ್ತಿವೆ ವಿದ್ಯಾರ್ಥಿಗಳು ಈ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು ಎಂದರು.
Also read: ತಾಳಗುಪ್ಪ-ಮೈಸೂರು & ಚಿಕ್ಕಮಗಳೂರು-ಯಶವಂತಪುರ ಎಕ್ಸ್’ಪ್ರೆಸ್ ರೈಲುಗಳ ಲೇಟೆಸ್ಟ್ ಅಪ್ಡೇಟ್
ಸಂಸ್ಥೆಯ ಕಾರ್ಯದರ್ಶಿ ರಮೇಶ್ ಎನ್ ಮಾತನಾಡಿ ವಿಜ್ಞಾನ ಲೋಕದ ವಿಸ್ಮಯ ಘಟನೆ ಇದು ಗಗನದಲ್ಲಿದ್ದ ಸುನಿತಾ 285 ದಿನಗಳ ಬಳಿಕ ಭೂಮಿಗೆ ಬರುತ್ತಿರುವುದು ಇಡೀ ಜಗತ್ತೇ ಸ್ವಾತಿಸುತ್ತಿದೆ ನಮ್ಮ ಕಾಲೇಜಿನಲ್ಲಿಯೂ ಕೂಡ ಸಂಭ್ರಮದಿಂದ ಸ್ವಾಗತ ಕೋರಲಾಗುತ್ತಿದೆ, ಸುನೀತ ವಿಶ್ವಕ್ಕೆ ಮಾದರಿಯಾಗಿದ್ದಾರೆ ವಿದ್ಯಾರ್ಥಿಗಳಿಗೆ ಇವರು ಸ್ಪೂರ್ತಿ ಎಂದರು.
ಕಾರ್ಯಕ್ರಮದಲ್ಲಿ ಬಿ ಇ ಓ ರಮೇಶ್, ಪ್ರಾಂಶುಪಾಲ ನವೀನ್, ವಿದ್ಯಾಶ್ರೀ, ಸೇರಿದಂತೆ ಹಲವರಿದ್ದರು. ಈ ಸಂಭ್ರಮದಲ್ಲಿ ಮಕ್ಕಳಿಗೆ ಸಿಹಿ ಹಂಚಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post